Sunday, July 26, 2026
spot_imgspot_img
spot_imgspot_img

*ರೈಲ್ವೇ ಖಾತೆ ಸಚಿವ ಶ್ರೀ ಸುರೇಶ್ ಅಂಗಡಿ ಮಹಾಮಾರಿ ಕೊರೋನಾಗೆ ಬಲಿ *

- Advertisement -
- Advertisement -

ಸಂಸದ, ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ವಿಧಿವಶರಾಗಿದ್ದಾರೆ.

ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುರೇಶ್ ಅಂಗಡಿ ಮೃತರಾಗಿರುವ ಬಗ್ಗೆ ವೈದ್ಯರು ದೃಢ ಪಡಿಸಿದ್ದಾರೆ.

2004, 2009, 2014 ಹಾಗೂ 2019ರಲ್ಲಿ ನಾಲ್ಕು ಬಾರಿ ಸಂಸದರಾಗಿದ್ದರು. 15 ದಿನಗಳ ಹಿಂದೆ, ಹೃದಯ ಸಂಬಂಧಿ ರೋಗದಿಂದ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಪಾಸಿಟಿವ್ ಆಗಿತ್ತು ಎನ್ನಲಾಗ್ತಿದೆ. ಆದರೆ, ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆಯೇ ಅನ್ನೋದು ದೃಢಪಟ್ಟಿಲ್ಲ. ಇತ್ತೀಚಿನ ದಿನದ ವರೆಗೂ ಬಹಳ ಆ್ಯಕ್ಟಿವ್ ಆಗಿದ್ದ ಸುರೇಶ್ ಅಂಗಡಿ ಮೃತರಾಗಿದ್ದು ಬಿಜೆಪಿ ಪಾಳಯದಲ್ಲಿ ದಿಗ್ಭ್ರಮೆ ಮೂಡಿಸಿದೆ.

ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ. ಬೆಳಗಾವಿ ರಾಜಲಕ್ಷ್ಮಣ ಗೌಡ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಮಾಡಿಕೊಂಡಿದ್ದಲ್ಲದೆ ತುಂಬ ಸರಳ ವ್ಯಕ್ತಿತ್ವದಿಂದ ರಾಜ್ಯ ರಾಜಕೀಯದಲ್ಲಿ ಆಕರ್ಷಣೆ ಗಳಿಸಿದ್ದರು.

- Advertisement -

Related news

error: Content is protected !!