Thursday, April 18, 2024
spot_imgspot_img
spot_imgspot_img

ವೈದ್ಯಕೀಯ ಶಿಕ್ಷಣದಲ್ಲಿ OBCಗೆ ಶೇ.27, ಬಡವರಿಗೆ ಶೇ.10 ಮೀಸಲಾತಿ

- Advertisement -G L Acharya panikkar
- Advertisement -

ನವದೆಹಲಿ: ಉನ್ನತ ವೈದ್ಯಕೀಯ ಶಿಕ್ಷಣ ಪಡೆಯುವ ಹಿಂದುಳಿದ ವರ್ಗಗಳ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರ ಗುಡ್​​ನ್ಯೂಸ್ ನೀಡಿದೆ. ಓಬಿಸಿ ವರ್ಗಕ್ಕೆ ಶೇಕಡಾ 27ರಷ್ಟು ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಜನರಲ್ ಮೆರಿಟ್ ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಮೀಸಲಾತಿಯನ್ನ ಘೋಷಣೆ ಮಾಡಿದೆ.

ವೈದ್ಯಕೀಯ ಅಥವಾ ಡೆಂಟಲ್ ಕೋರ್ಸ್​ ವಿಷಯದಲ್ಲಿ ಯುಜಿ (ಪದವಿ) ಹಾಗೂ ಪಿಜಿ (ಸ್ನಾತಕೋತ್ತ) ಮಾಡಲು ಕಾಯುತ್ತಿರುವ ಒಬಿಸಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇಕಡಾ 10 ರಷ್ಟು ಮೀಸಲಾತಿ ಸಿಗಲಿದೆ. ಆಲ್​ ಇಂಡಿಯಾ ಕೋಟಾ ಸ್ಕೀಮ್ ಫಾರ್ ಯುಜಿ ಮತ್ತು ಪಿಜಿ ಮೆಡಿಕಲ್ ಡೆಂಟಲ್ ಕೋರ್ಸ್​ನಡಿ ಈ ಮೀಸಲಾತಿ ಅನ್ವಯ ಆಗಲಿದೆ.

2021-22 ರ ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್​, ಎಂಡಿ, ಎಂಎಸ್​, ಡಿಪ್ಲೋಮಾ, ಬಿಡಿಎಸ್​ ಎಂಡಿಎಸ್​ ಕೋರ್ಸ್ ಮಾಡಲು ಇಚ್ಛಿಸಿರುವ ವಿದ್ಯಾರ್ಥಿಗಳಿಗೆ ಇದರ ಉಪಯೋಗ​ ಆಗಲಿದೆ. 5550 ವಿದ್ಯಾರ್ಥಿಗಳಿಗೆ ಈ ಮೀಸಲಾತಿಯ ಲಾಭ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಾಮಾಜಿಕ ಸಮತೋಲನ ಕಾಪಾಡಲು ಈ ಕ್ರಮ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!