- Advertisement -
- Advertisement -



ಮಂಗಳೂರು: ಸ್ಟೇಟ್ ಬ್ಯಾಂಕ್ ಖಾಸಗಿ ಬಸ್ಸು ನಿಲ್ದಾಣದಿಂದ ದಾವಣಗೆರೆ ಮೂಲದ ಸಲ್ಮಾಬಾನು (37) ಮತ್ತು ಆಕೆಯ ಪುತ್ರ ಮುಹಮ್ಮದ್ ಯೂನಸ್ (14) ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಚಿಲಾಪೂರ ಗ್ರಾಮದಲ್ಲಿ ವಾಸವಾಗಿದ್ದ ದಾದಾಪೀರ್ ಅವರು ಪತ್ನಿ ಸಲ್ಮಾ ಮತ್ತು ಪುತ್ರ ಯೂನಸ್ ನೊಂದಿಗೆ ಶಿವಮೊಗ್ಗದಿಂದ ಬಸ್ಸಿನಲ್ಲಿ ಹೊರಟು ಜು.9ರಂದು ಬೆಳಗ್ಗೆ 8 ಗಂಟೆ ವೇಳೆಗೆ ಮಂಗಳೂರು ಬಸ್ಸು ನಿಲ್ದಾಣದಲ್ಲಿ ಬಂದು ಇಳಿದಿದ್ದಾರೆ. ಬಳಿಕ ಬಟ್ಟೆಗೆ ತೆರಳುವ ಉದ್ದೇಶದಿಂದ ತನ್ನ ಚಿಕ್ಕಪ್ಪನ ಮಗಳು ಗುಲ್ಬರ್‌ಗೆ ಕರೆ ಮಾಡಿ ಕೆಲಸದ ಬಗ್ಗೆ ವಿಚಾರಿಸಿದ್ದು, ಅದಕ್ಕೆ ಆಕೆ 2-3 ದಿನ ಬಿಟ್ಟು ಬನ್ನಿ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.
- Advertisement -








