Wednesday, June 24, 2026
spot_imgspot_img
spot_imgspot_img

ಧರ್ಮಸ್ಥಳಕ್ಕೆ ಹೋಗಿದ್ದ ಬಂಟ್ವಾಳದ ಹೇಮಾವತಿ ನಾಪತ್ತೆ ಪ್ರಕರಣ: 12ವರ್ಷಗಳ ನಂತರ ಬೆಳ್ತಂಗಡಿ SIT ಕಛೇರಿಗೆ ದೂರು ನೀಡಿದ ಅಣ್ಣ

- Advertisement -
- Advertisement -

ಬೆಳ್ತಂಗಡಿ: 12 ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಕವಳಮುಡೂರು ಗ್ರಾಮದ ಹೇಮಾವತಿ ಧರ್ಮಸ್ಥಳಕ್ಕೆ ಹೋದವರು ಕಾಣೆಯಾಗಿದ್ದಾರೆ. ಯಾವುದೇ ಮಾಹಿತಿ ಇಲ್ಲದ ಕಾರಣ ಎಸ್. ಐ. ಟಿ ಕಛೇರಿಗೆ ಅಣ್ಣ ನಿತಿನ್ ದೂರು ನೀಡಲು ಆ.14ರಂದು ಭೇಟಿ ನೀಡಿದ್ದಾರೆ.

ಸ್ಥಳೀಯ ಮನೆಯವರ ಜೊತೆಗೆ ತೆರಳಿದ್ದ ತಂಗಿ ವಾಪಸ್ಸು ಬಾರದೆ ಇದ್ದ ಸಂದರ್ಭದಲ್ಲಿ ಹತ್ತಿರ ಮನೆಯವರಲ್ಲಿ ಕೇಳಿದಾಗ ನನ್ನ ಜೊತೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ಧರ್ಮಸ್ಥಳದಿಂದ ಹೋಗಿ ಅವರ ಮೊಬೈಲ್‌ ಸಂಖ್ಯೆಯಲ್ಲಿ ನನಗೆ ಕರೆ ಮಾಡಿರುತ್ತಾರೆ ಇದರಿಂದ ನನಗೆ ತಿಳಿದು ಬಂದಿದೆ.ನಾವು ಕಾಣೆಯಾದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಗೊತ್ತಾದರೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಈವರೆಗೆ ನಮಗೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಆದ ಕಾರಣ ಎಸ್.ಐ.ಟಿ ಮೇಲೆ ನಂಬಿಕೆ ಇಟ್ಟು ನಾವು ದೂರು ನೀಡಲು ಬಂದಿದ್ದೇವೆ. ಎಂದು ದೂರು ನೀಡಿದ್ದಾರೆ.

- Advertisement -

Related news

error: Content is protected !!