- Advertisement -
- Advertisement -





ಬೆಳ್ಳಾರೆ ಪೋಲೀಸರ ಕಾರ್ಯಕ್ಕೆ ಮೆಚ್ಚುಗೆ
ಐವರ್ನಾಡಿನ ಎನ್.ಎಸ್.ಸೌಂಡ್ಸ್ & ಲೈಟಿಂಗ್ಸ್, ಶಾಮಿಯಾನದ ಮಾಲಕ ಸುನಿಲ್ ನಿಡ್ಡಾಜೆಯವರ ಪಿಕಪ್ ಆ.11 ರಂದು ತನ್ನ ಅಂಗಡಿ ಎದುರು ನಿಲ್ಲಿಸಿದ್ದರು. ಅಂದು ರಾತ್ರಿ ಪಿಕಪ್ ಕಾಣೆಯಾಗಿತ್ತು.
ಈ ಬಗ್ಗೆ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಮುಖ್ಯ ರಸ್ತೆಯಲ್ಲಿರುವ ಸಿ.ಸಿ.ಕೆಮರಾಗಳನ್ನು ಪರಿಶೀಲಿಸಿದ್ದರು.ಇಂದು ಕಾರ್ಕಳ ತಾಲೂಕಿನ ಮುಡೂರು ಎಂಬಲ್ಲಿ ಪಿಕಪ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಪಿಕಪ್ ಪೋಲೀಸರ ವಶದಲ್ಲಿದ್ದು, ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.
- Advertisement -








