Tuesday, June 9, 2026
spot_imgspot_img
spot_imgspot_img

ಬೆಂಗಳೂರಿನಿಂದ ಮಂಗಳೂರಿಗೆ ಬಂದಿಳಿದ ಬಾಲಕಿ ನಾಪತ್ತೆ; ಪತ್ತೆಗೆ ಮನವಿ

- Advertisement -
- Advertisement -

ಮಂಗಳೂರು: ಬೆಂಗಳೂರು ಮೂಲದ ಬಾಲಕಿಯೊಬ್ಬಳು ಮಂಗಳೂರಿಗೆ ಬಂದಿಳಿದು ನಂತರ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮಹಾಲಕ್ಷ್ಮೀ ಲೇಔಟ್‌ನ ಭಾರ್ಗವಿ (14) ಎಂಬಾಕೆ ನಾಪತ್ತೆಯಾದ ಬಾಲಕಿ.

ಕಳೆದ ಸೋಮವಾರ ಈಕೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದು, ಬಸ್‌ ಮೂಲಕ ಮುಂಜಾನೆ 3 ಗಂಟೆಗೆ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದಳು. ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್, ಕದ್ರಿ ಪಾರ್ಕ್ ತಿರುಗಿದ್ದಾಳೆ. ಅಲ್ಲಿಂದ ರಿಕ್ಷಾದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದು ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನಲ್ಲಿ ಹೇಳಿರುವ ಮಾಹಿತಿ ಇದೆ. ಆದರೆ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಕ್ಟೋಬರ್ 17ರ ಸಂಜೆ 4.30ರಿಂದ ಈಕೆ ನಾಪತ್ತೆಯಾಗಿದ್ದು, 5 ಫೀಟ್ 3 ಇಂಚು ಎತ್ತರವಿದ್ದಾಳೆ. ನಾಪತ್ತೆಯಾಗುವ ದಿನದಂದು ಈಕೆ ಕೇಸರಿ ಬಣ್ಣದ ಬಟ್ಟೆ ಬೂದು ಬಣ್ಣದ ಜಾಕೆಟ್ ತೊಟ್ಟಿದ್ದಳು. ಈಕೆ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ ಸಂಖ್ಯೆ 9972031021ನ್ನು ಸಂಪರ್ಕಿಸಲು ಸೂಚಿಸಲಾಗಿದೆ.

- Advertisement -

Related news

error: Content is protected !!