Saturday, June 28, 2025
spot_imgspot_img
spot_imgspot_img

ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದರೆ ಮಸಿ ಬಳಿಯುತ್ತೇವೆ ಎಂದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಗೆ ಬಿಜೆಪಿ ನಾಯಕರು ಗರಂ

- Advertisement -
- Advertisement -

ಮಂಗಳೂರು: ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದರೆ ಮಸಿ ಬಳಿಯುತ್ತೇವೆ ಎಂದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಗೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ‌. ಈ ಬಗ್ಗೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಉನ್ನತ ಪರಂಪರೆಯುಳ್ಳ ಪೂಜ್ಯರಾದ ಯೋಗಿ ಬಗ್ಗೆ ಮಿಥುನ್ ರೈ ಅವಹೇಳನ ಆಗುವ ರೀತಿ ಮಾತಾಡಿದ್ದಾರೆ. ಇದು ಮಿಥುನ್ ರೈ ಯೋಗ್ಯತೆಯನ್ನ ತೋರಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಬಾಯಿಗೆ ಬಂದ ರೀತಿ ಮಾತಾಡಲು ಕಾಂಗ್ರೆಸಿನವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಖರೀದಿಸಿಲ್ಲ. ಅತ್ಯಾಚಾರ ವಿಚಾರದ ಬಗ್ಗೆ ಪ್ರತಿಭಟನೆ ನಡೆಸುವುದಿದ್ದರೂ, ಕಾನೂನು ಮೇಲೆ ನಂಬಿಕೆ ಇರಲಿ. ಕಾನೂ‌ನು ಮೀರಿದ ವರ್ತನೆ ಸರಿಯಲ್ಲ. ಕಾನೂನು ಬಾಹಿರ ರೀತಿ ಪ್ರತಿಭಟನೆ ನಡೆಸುತ್ತಾರೆ. ಕಾನೂನು ಉಲ್ಲಂಘನೆ ಆಗುವ ರೀತಿ ಮಾತುಗಳನ್ನಾಡುತ್ತಾರೆ. ಅತ್ಯಾಚಾರ ವಿರೋಧಿಸಿ ಕಠಿಣ ಕಾನೂನು ಜಾರಿಗೆ ತಂದಿದ್ದು ಕೇಂದ್ರದ ಮೋದಿ ಸರ್ಕಾರ. ಇದು ಕಾಂಗ್ರೆಸಿನವರಿಗೆ ತಿಳಿದಿರಲಿ ಎಂದು ಸುದರ್ಶನ್ ಹೇಳಿದರು.

ಅಲ್ಲದೆ ಕಾಂಗ್ರೆಸ್ ಪ್ರತಿಭಟನೆಯ ಹಿಂದೆ ರಾಜಕೀಯ ಉದ್ದೇಶ ಇದೆ. ಕೇರಳದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಕಾಂಗ್ರೆಸ್ ಮೌನ ವಹಿಸುತ್ತದೆ ಅದರ ಬಗ್ಗೆ ಮಾತನಾಡಲ್ಲ. ಯಾಕಂದ್ರೆ ಅಲ್ಲಿ ಇವರ ಮಿತ್ರರದ್ದೇ ಆಡಳಿತ ಇದೆ.‌ ಬಿಜೆಪಿ ಉತ್ತರ ಪ್ರದೇಶದ ಅತ್ಯಾಚಾರ ಘಟನೆಯನ್ನೂ ಖಂಡಿಸುತ್ತದೆ. ಮಿಥುನ್ ರೈ ಹೇಳಿಕೆಯನ್ನೂ ಬಿಜೆಪಿ ಖಂಡಿಸುತ್ತದೆ. ಇಂತಹ ಹೇಳಿಕೆಯನ್ನ ಕಾಂಗ್ರೆಸ್ ನಾಯಕರು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂದು ಸುದರ್ಶನ್ ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!