Wednesday, May 15, 2024
spot_imgspot_img
spot_imgspot_img

ನಯನಾ ಮೋಟಮ್ಮ ಖಾಸಗಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್; ಮೂರ್ಖರಿಗೆ ರಾಜಕೀಯ ಜೀವನ ಮತ್ತು ಖಾಸಗಿ ಜೀವನದ ನಡುವಿನ ವ್ಯತ್ಯಾಸ ತಿಳಿದಿಲ್ಲ- ಜಾಲತಾಣದಲ್ಲಿ ಪ್ರಸಾರ ಮಾಡಿದವರಿಗೆ ತಿರುಗೇಟು ನೀಡಿದ ಮೂಡಿಗೆರೆ ಶಾಸಕಿ

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ನನ್ನ ಮೇಲೆ ಸೈಬರ್​ ದಾಳಿ ತೀವ್ರವಾಗಿದೆ ಎಂದು ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ಅವರು ಗಂಭೀರ ಆರೋಪ ಮಾಡಿದ್ದಾರೆ.

ನಯನಾ ಅವರು ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ. ಚಿಕ್ಕಮಗಳೂರಿನ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕಿ. ತನ್ನ ಖಾಸಗಿ ಜೀವನದ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಡುವ ಮೂಲಕ ನನ್ನ ಮೇಲೆ ಸೈಬರ್​ ದಾಳಿ ನಡೆಸಲಾಗುತ್ತಿದೆ ಎಂದು ಆರೋಪ ಮಾಡಿರುವ ನಯನಾ, ಈ ವಿಚಾರದಲ್ಲಿ ತಮ್ಮ ದೃಢ ನಿಲುವು ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ನನ್ನ ವಿರುದ್ಧ ಸೋತವರು ಭ್ರಮನಿರಸನಗೊಂಡು ಸೈಬರ್ ದಾಳಿ ಮಾಡಿಸುತ್ತಿದ್ದಾರೆ ಎಂದು ನಯನಾ ಪ್ರತಿಕ್ರಿಯಿಸಿದ್ದಾರೆ. ಇಂತ ದುಷ್ಕೃತ್ಯಗಳಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ ಎಂದಿರುವ ನಯನಾ, ಈ ಮೂರ್ಖರಿಗೆ ರಾಜಕೀಯ ಜೀವನ ಮತ್ತು ಖಾಸಗಿ ಜೀವನದ ನಡುವಿನ ವ್ಯತ್ಯಾಸ ತಿಳಿದಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

43 ವರ್ಷದ ನಯನಾ ಅವರು ತಮ್ಮ ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡು ವಿರೋಧಿಗಳ ಸೈಬರ್​ ದಾಳಿಗೆ ಪ್ರತ್ಯುತ್ತರ ನೀಡಿದ್ದಾರೆ. ರಾಜಕಾರಣಿಯಾದ ಮಾತ್ರಕ್ಕೆ ಸಾಮಾನ್ಯವಾಗಿ ಇರಬಾರದಾ? ಮುಖವಾಡ ಹಾಕಿಕೊಂಡು ಯಾಕೆ ಜೀವನ ಮಾಡಬೇಕು? ರಾಜಕಾರಣಿಗಳು ಅಂದರೆ ಅವರು ಕೂಡ ಬೇರೆಯವರ ರೀತಿಯಲ್ಲಿ ಸಾಮಾನ್ಯರು. ನಾನು ಕೆಲವೊಮ್ಮೆ ಗೋವಾಗೆ ಹೋಗುತ್ತೇನೆ. ಅಲ್ಲಿ ಸೀರೆ ಉಟ್ಟಿಕೊಳ್ಳಲು ಆಗುತ್ತಾ? ಎನ್ನುವ ಮೂಲಕ ಖಡಕ್​ ಆಗಿ ತಿರುಗೇಟು ನೀಡಿದ್ದಾರೆ.

ನಯನಾ ಅವರ ವಿಡಿಯೋಗೆ ಸಾಕಷ್ಟು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ ಮೇಡಂ, ನೀವು ನಿಮ್ಮ ಕಾರ್ಯ ಮುಂದುವರೆಸಿ, ಯಾವುದಕ್ಕೂ ತೆಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ನಿಮ್ಮಿಂದ ಸಮಾಜ ಸೇವೆ ಮುಂದುವರಿಯಲಿ. ನೀವು ಮಾಡುವ ಅಭಿವೃದ್ಧಿ ಕೆಲಸಗಳೇ ವಿರೋಧಿಗಳಿಗೆ ಉತ್ತರ ಎಂದು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!