Wednesday, July 22, 2026
spot_imgspot_img
spot_imgspot_img

ಪ್ರಧಾನಿ ಮೋದಿಯನ್ನು ಸ್ವಾಗತಿಸಿದ MLC ಕಿಶೋರ್‌ ಬೊಟ್ಯಾಡಿ ಪತ್ನಿ; ವಿವಾದಕ್ಕಿಡಾದ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಪ್ರತಿಕ್ರಿಯೆ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ MLC ಕಿಶೋರ್‌ ಬೊಟ್ಯಾಡಿ ಪತ್ನಿ ಮೋದಿಯಯನ್ನು ಸ್ವಾಗತಿಸಿದ್ದು ವಿವಾದಕ್ಕಿಡಾಗಿದ್ದು ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಸತೀಶ್‌ ಕುಂಪಲ ” ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು, ಕೆಳಸ್ಥರದ ಕಾರ್ಯಕರ್ತರನ್ನು, ಮೋದಿಯವರ ಅಥವಾ ಬೇರೆ ಪಾರ್ಟಿಯ ಯಾವುದಾದರು ಈ ರೀತಿಯ ವ್ಯವಸ್ಥೆ ಬಂದಾಗ ಕಳಿಸಬೇಕು ಎನ್ನುವ ವಾದವನ್ನು ಅದರ ಪರವಾಗಿ ನಾನು ಇದ್ದೇನೆ. ಯಾಕೆಂದರೆ ಅದು ಸರಿ ಇದೆ. ಆದರೆ ಕಿಶೋರ್‌ರವರ ಹೆಂಡತಿ ಅವರು ಕೂಡ ಒಂದು ಮಹಿಳೆ, ನಿನ್ನೆ ಮಹಿಳಾ ಮೋರ್ಚಾದ ಸಭೆಯಲ್ಲಿ ಅವರು ಬಂದಿದ್ರು ಈ ವೇಳೆ ಅವರು ನಾನು ಕೂಡ ಪಾರ್ಟಿಗೋಸ್ಕರ ಕೆಲಸ ಮಾಡಿದವಳು. ನಾನು ಪಾರ್ಟಿಯ ಈ ಒಂದು ವ್ಯವಸ್ಥೆಯಲ್ಲಿರುವವಳು ನಾನೊಂದು ಮೋದಿಯವರಿಗೆ ನಮಸ್ಕಾರ ಹೇಳ್ಳಿಕೆ ಹೊದದ್ದನ್ನೇ ಇಷ್ಟು ದೊಡ್ಡ ವಿವಾದ ಮಾಡಿ ನಾನು ಒಂದು ಮಹಿಳೆ, ನನ್ನ ಪೋಟೋವನ್ನು ಈ ರೀತಿ ವೈರಲ್‌ ಮಾಡೊದಾದ್ರೆ ಸಮಾಜದಲ್ಲಿ ನನಗೆಷ್ಟು ಗಾಸಿಯಾಗಬಹುದು ಎನ್ನುವ ಮಾತಿನಲ್ಲಿ ಅವರು ಭಾರಿ ದುಃಖವನ್ನು ವ್ಯಕ್ತಪಡಿಸಿದ್ರು.

MLC ಕಿಶೋರ್‌ MLC ಆಗಿರಬಹುದು, ಅವರ ಹೆಂಡತಿ ಕೂಡ ಸಮಾಜದಲ್ಲಿ ಪಾರ್ಟಿಯಲ್ಲಿ ನಮ್ಮ ಸಂಘಟನೆಯೊಂದಿಗೆ ಇರುವಂತ ಒಂದು ಕುಟುಂಬ. ಅವರೇನು ಕಿಶೋರ್‌ರವರ ಹೆಂಡತಿಯನ್ನು ನಾವು ಕಳಿಸಿದ್ದು ತಪ್ಪೇ ಅಂತ ಯಾರಾದ್ರೂ ವ್ಯಕ್ತಪಡಿಸುದಾದ್ರೆ ಅವರೇನು ಕ್ರಿಮಿನಲ್‌ ಅಲ್ಲ, ಅವರ ಮೇಲೆ ಬೇರೆ ದರೋಡೆ ಕೆಸ್‌,ದೇಶ ವಿರೋದಿ ಕೃತ್ಯ ಮಾಡಿರುವಂತದ್ದು ಏನೂ ಇಲ್ಲ. ಒಬ್ಬ ಸಾಮಾನ್ಯ ಮಹಿಳೆಯನ್ನು ಮೋದಿಯವರ ಸ್ವಾಗತಿಸುದಕ್ಕೆ ಕಳಿಸಿರುವುದು ದೊಡ್ಡ ವಿವಾದ ಮಾಡುವವರಿಗೆ ನಾನು ಏನು ಹೇಳಬೇಕು ಅಂತ ಗೊತ್ತಾಗೊದಿಲ್ಲ. ಅನಾವಶ್ಯಕವಾಗಿ ವಿವಾದ ಮಾಡೊದಕ್ಕಿಂತ ಮುಂದೆ ಈ ರೀತಿ ಇನ್ನೂ ಅನೇಕ ಕಾರ್ಯಕರ್ತರಿಗೆ ಅವಕಾಶವನ್ನು ಕೊಡಬೇಕು ಅಂತ ಯಾರಾದ್ರೂ ಹೇಳಿದ್ರೆ ಅದನ್ನು ಅತ್ಯಂತ ಪ್ರತಿಯಿಂದ ಸ್ವಾಗತಿಸುತ್ತೇನೆ ಎಂದು ಹೇಳಿದರು.

- Advertisement -

Related news

error: Content is protected !!