Friday, April 26, 2024
spot_imgspot_img
spot_imgspot_img

ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ವಶಂಕರರ ಹೆಸರು ಸೂಕ್ತ – ಪುತ್ತಿಗೆ ಶ್ರೀ

- Advertisement -G L Acharya panikkar
- Advertisement -

ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ವ ಶಂಕರರ ಹೆಸರನ್ನಿಡುವುದು ಅತ್ಯಂತ ಅರ್ಥಪೂರ್ಣ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಹಾಗೂ ಶೃಂಗೇರಿಯಲ್ಲಿ ಆಧ್ಯಾತ್ಮಿಕ ಕೇಂದ್ರಗಳನ್ನು ಸ್ಥಾಪಿಸಿರುವ ಮಧ್ವಾಚಾರ್ಯ ಹಾಗೂ ಶಂಕರಾಚಾರ್ಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಹೆಚ್ಚು ಮೌಲಿಕ. ಅಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಮಾನ ನಿಲ್ದಾಣ ಮೂಡಿಬರುವಂತೆ ಆಚಾರ್ಯರ ನೆಲೆವೀಡಿನಲ್ಲಿರುವ ವಿಮಾನ ನಿಲ್ದಾಣಕ್ಕೆ ಮಧ್ವಶಂಕರರ ಹೆಸರನ್ನು ನಾಮಕರಣ ಮಾಡಿದರೆ ಭಾರತದ ದಾರ್ಶನಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುತ್ತದೆ. ಜಗತ್ತಿನಲ್ಲಿ ಧರ್ಮ ಪ್ರಚಾರಕ್ಕೆ ಪೂರಕವಾಗುವುದರ ಜತೆಗೆ ಭಾವೈಕ್ಯತೆಗೆ ಇಂಬು ನೀಡಿದಂತಾಗುತ್ತದೆ ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ.

ರಾಮಾನುಜಾಚಾರ್ಯ, ಬಸವಣ್ಣನವರಂತಹ ಧಾರ್ಮಿಕ ನೇತಾರರ ಹೆಸರನ್ನು ಸಮೀಪದ ವಿಮಾನ ನಿಲ್ದಾಣಗಳಿಗೆ ಇಡಬೇಕು ಎಂದು ಪುತ್ತಿಗೆ ಮಠದ ಶ್ರೀಗಳು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!