- Advertisement -
- Advertisement -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ಸಲುವಾಗಿ ಇಂದು ಪ್ರಮುಖ ಯುದ್ಧ ಟ್ಯಾಂಕ್ ಅರ್ಜುನ್ ಮಾರ್ಕ್ 1ಎ ಲೋಕಾರ್ಪಣೆ ಮಾಡಲಿದ್ದಾರೆ.

ಇತ್ತೀಚೆಗೆ ರಕ್ಷಣಾ ಸಚಿವಾಲಯವು ಉನ್ನತ ಮಟ್ಟದ ಸಭೆಯನ್ನ ನಡೆಸಿ, ಆ ಸಭೆಯಲ್ಲಿ118 ಅರ್ಜುನ್ ಮಾರ್ಕ್ 1ಎ ಟ್ಯಾಂಕ್‌ಗಳನ್ನ ಭಾರತೀಯ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ.

ಇವುಗಳ ಖರೀದಿಗೆ ಬರೋಬ್ಬರಿ 8 ಸಾವಿರದ 400 ಕೋಟಿ ರೂಪಾಯಿ ವೆಚ್ಚವಾಗಲಿದೆ. ಅರ್ಜುನ್ ಟ್ಯಾಂಕ್ ಆಗಮನದಿಂದ ಭೂಸೇನೆಯ ಬಲ ಮತ್ತಷ್ಟು ಹೆಚ್ಚಲಿದೆ. ಶತ್ರು ಪಾಳಯಕ್ಕೆ ಬಹುದೊಡ್ಡ ಆಘಾತ ನೀಡುವ ಸಾಮರ್ಥ್ಯ ಈ ಅರ್ಜುನ್ ಮಾರ್ಕ್1ಎ ಟ್ಯಾಂಕ್ ಹೊಂದಿದೆ.


- Advertisement -