Friday, April 19, 2024
spot_imgspot_img
spot_imgspot_img

2 ತಿಂಗಳ ಮಗುವಿಗಾಗಿ ಚಂದ್ರನ ಅಂಗಳದ ಜಾಗವನ್ನು ಖರೀದಿ ಮಾಡಿ ಉಡುಗೊರೆ ನೀಡಿದ ತಂದೆ!

- Advertisement -G L Acharya panikkar
- Advertisement -

ಮಕ್ಕಳು ಪೋಷಕರ ಕಣ್ಣಿದ್ದಂತೆ. ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನು ಸಾಬೀತು ಪಡಿಸೋಕೆ ಪೋಷಕರು ಏನ್​ ಬೇಕಿದ್ರು ಮಾಡ್ತಾರೆ.

ಅದೇ ರೀತಿ ಸೂರತ್​​ನ ಉದ್ಯಮಿ ವಿಜಯ್​ಭಾಯ್​ ಕಠರಿಯಾ ಎಂಬವರು ತಮ್ಮ 2 ತಿಂಗಳ ಗಂಡು ಮಗುವಿಗೆ ವಿಶೇಷವಾಗಿ ಏನಾದರೂ ಉಡುಗೊರೆ ನೀಡಬೇಕು ಅಂತಾ ಪ್ಲಾನ್​ ಮಾಡಿದ್ದರು. ಹೀಗಾಗಿ ತಮ್ಮ ಮಗು ನಿತ್ಯಾಗಾಗಿ ಚಂದ್ರನ ಅಂಗಳದಲ್ಲಿ ಜಾಗವನ್ನು ಖರೀದಿ ಮಾಡಿದ್ದಾರೆ.

ಇದಕ್ಕಾಗಿ ವಿಜಯ್​​ ನ್ಯೂಯಾರ್ಕ್​ನ ಅಂತಾರಾಷ್ಟ್ರೀಯ ಲುನಾರ್​ ನೋಂದಾವಣಿ ಕೇಂದ್ರದಿಂದ ಅನುಮತಿ ಪಡೆದಿದ್ದಾರೆ. ಇದಕ್ಕಾಗಿ ಬೇಕಾದ ಎಲ್ಲಾ ದಾಖಲೆಗಳನ್ನೂ ವಿಜಯ್​​ ಸಲ್ಲಿಸಿದ್ದರು.

ಇದೀಗ ಈ ಜಾಗವನ್ನು ವಿಜಯ್​ ಮಗುವಿನ ಹೆಸರಿಗೆ ರಿಜಿಸ್ಟರ್​ ಮಾಡಲಾಗಿದೆ. ಈ ಜಾಗವು ಮಾರೆ ಮೊಮೊಸ್ಕೊವಿಯೆನ್ಸ್ ನಲ್ಲಿದೆ.

ಈ ಜಾಗದ ನಿಜವಾದ ಬೆಲೆ ಎಷ್ಟು ಅನ್ನೋದು ಇನ್ನೂ ವರದಿಯಾಗಿಲ್ಲ. ಆದರೆ ಅಲ್ಲಿ ಜಾಗ ಖರೀದಿ ಮಾಡಬೇಕು ಅಂದರೆ 750 ಡಾಲರ್​ ಅಂತೂ ಬೇಕು ಎಂದು ಹೇಳಲಾಗುತ್ತೆ.

ಈ ಮೂಲಕ ಚಂದ್ರನ ಅಂಗಳದಲ್ಲಿ ಭೂಮಿಯನ್ನು ಖರೀದಿಸಿದ ಸೂರತ್​ನ ಮೊದಲ ಉದ್ಯಮಿ ಎಂಬ ಕೀರ್ತಿಗೆ ವಿಜಯ್​ ಸಾಕ್ಷಿಯಾಗಿದ್ದಾರೆ.

ಚಂದ್ರನ ಅಂಗಳದಲ್ಲಿ ಯಾರಿಗೂ ಆಸ್ತಿ ಮಾಡೋಕೆ ಸಾಧ್ಯವಿಲ್ಲ. ಆದರೆ ಈ ಪ್ರಮಾಣ ಪತ್ರವನ್ನು ಪಡೆಯೋಕೆ ಇಷ್ಟು ವೆಚ್ಚವಾಗುತ್ತದೆ. ಚಂದ್ರನ ಅಂಗಳದಲ್ಲಿ ಜಾಗ ಪಡೆಯೋದನ್ನು ಉತ್ತಮ ಗಿಫ್ಟ್ ಎಂದು ಭಾವಿಸಲಾಗುತ್ತೆ.

ಈ ಹಿಂದೆ ರಾಜಸ್ಥಾನದ ಧರ್ಮೇಂದ್ರ ಅನಿಜಾ ಎಂಬವರು ಚಂದ್ರನ ಅಂಗಳದಲ್ಲಿ ಮೂರು ಎಕರೆ ಭೂಮಿ ಖರೀದಿ ಮಾಡಿ ಅದನ್ನು ತಮ್ಮ ಪತ್ನಿ ಸಪ್ನಾ ಅನಿಜಾರಿಗೆ ಮದುವೆ ವಾರ್ಷಿಕೋತ್ಸವದಂದು ಗಿಫ್ಟ್ ರೂಪದಲ್ಲಿ ನೀಡಿದ್ದರು.

driving
- Advertisement -

Related news

error: Content is protected !!