Sunday, June 21, 2026
spot_imgspot_img
spot_imgspot_img

ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜಕ್ಕೆ ಅಪಮಾನ: ಪ್ರಧಾನಿ ಮೋದಿ ಖಂಡನೆ

- Advertisement -
- Advertisement -

ನವದೆಹಲಿ: 2021ರ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜನವರಿ 26ರಂದು ಕೆಂಪು ಕೋಟೆಯಲ್ಲಿ ನಡೆದ ವಿದ್ಯಮಾನಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಕೂಡ ಪ್ರಧಾನಿ ಜನರೊಂದಿಗೆ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್ ತಂಡದ ಸಾಧನೆಯನ್ನು ಅವರು ಕೊಂಡಾಡಿದ್ದಾರೆ.

ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತ ಕೊವಿಡ್ ಲಸಿಕೆ ಪೂರೈಸುತ್ತಿದೆ. ಜಾಗತಿಕ ಮನ್ನಣೆ ಗಳಿಸಿದೆ. ದೇಶದಲ್ಲಿ ಅಲ್ಪ ಅವಧಿಯಲ್ಲಿ 30 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಭಾರತದ ಸಹಾಯಕ್ಕೆ ಬ್ರೆಜಿಲ್ ಧನ್ಯವಾದ ಅರ್ಪಿಸಿದೆ ಎಂದು ಪ್ರಧಾನಿ ಹೇಳಿದರು.

ಅಮೆರಿಕದಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನ ಚಲಾಯಿಸಿಕೊಂಡು ಬಂದ ಮಹಿಳಾ ಪೈಲಟ್ ಗಳ ಸಾಧನೆಯನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

- Advertisement -

Related news

error: Content is protected !!