Monday, July 7, 2025
spot_imgspot_img
spot_imgspot_img

ತಜ್ಞರೊಂದಿಗೆ ಪ್ರಧಾನಿ ಮೋದಿ ಸಭೆ: ಅಂತಿಮ ವರ್ಷದ ಎಂಬಿಬಿಎಸ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್​ ಡ್ಯೂಟಿಗೆ ಕರೆಯುವ ಸಾಧ್ಯತೆ

- Advertisement -
- Advertisement -

ನವದೆಹಲಿ: ದೇಶದಲ್ಲಿ ಕೊರೊನಾ ಮಹಾಮಾರಿಯ ಎರಡನೇ ಅಲೆ ವ್ಯಾಪಕವಾಗ್ತಿರುವ ಹಿನ್ನೆಲೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ​ಮೂಲಕ ತಜ್ಞರೊಂದಿಗೆ ಸಭೆ ನಡೆಸಿದರು.

ಈ ವೇಳೆ ಅವರು ಆಕ್ಸಿಜನ್ ಹಾಗೂ ಔಷಧಿಗಳ ಲಭ್ಯತೆ ಕುರಿತು ಚರ್ಚೆ ಮಾಡಿದರು.

ಕೊರೊನಾ ಹಿನ್ನೆಲೆ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಸ್ಥಿತಿಗತಿ ಹೇಗಿದೆ ಹಾಗೂ ಮಾನವ ಸಂಪನ್ಮೂಲವನ್ನ ಹೆಚ್ಚಿಸುವ ವಿಧಾನಗಳೇನು ಎಂಬ ಬಗ್ಗೆ ಸಮಾಲೋಚನೆ ನಡೆಸಿದ್ರು ಎಂದು ವರದಿಯಾಗಿದೆ.

ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ಕೆಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿರೋದಾಗಿ ಸುದ್ಧಿ ಸಂಸ್ಥೆ ವರದಿ ಮಾಡಿದೆ.

ಸಂಭಾವ್ಯ ನಿರ್ಧಾರಗಳು:

ನೀಟ್ ಪರೀಕ್ಷೆಯನ್ನ ವಿಳಂಬ ಮಾಡುವ ಸಾಧ್ಯತೆ.

ಎಂಬಿಬಿಎಸ್ ಪಾಸ್- ಔಟ್​​ಗಳು ಕೋವಿಡ್ ಕರ್ತವ್ಯಕ್ಕೆ ಸೇರಲು ಉತ್ತೇಜಿಸುವುದು.

ಅಂತಿಮ ವರ್ಷ ಎಂಬಿಬಿಎಸ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಸೇವೆಗಳನ್ನು ಕೋವಿಡ್ ಡ್ಯೂಟಿಗೆ ಬಳಸಿಕೊಳ್ಳುವುದು.

ಕೋವಿಡ್ ಡ್ಯೂಟಿ ಮಾಡುವ ವೈದ್ಯಕೀಯ ಸಿಬ್ಬಂದಿಗೆ ಸರ್ಕಾರಿ ನೇಮಕಾತಿಯಲ್ಲಿ ಆದ್ಯತೆ ಮತ್ತು ಆರ್ಥಿಕ ಪ್ರೋತ್ಸಾಹ ನೀಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

driving
- Advertisement -

Related news

error: Content is protected !!