- Advertisement -
- Advertisement -
ನವದೆಹಲಿ: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಸ್ಕ್ವಾ ಡ್ರನ್ ಲೀಡರ್ ಮೋಹನಾ ಸಿಂಗ್ ಬುಧವಾರ ನಿಯೋಜನೆಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್‌ನ ನಂ 18- ಫ್ಲೈ ಯಿಂಗ್ ಬುಲೆಟ್ಸ್ ಸ್ಕ್ವಾ ಡ್ರನ್‌ಗೆ ಮೋಹನಾ ನಿಯೋಜನೆಗೊಂಡಿದ್ದಾರೆ. ರಾಜಸ್ಥಾನದಲ್ಲಿದ್ದ ನಂ3 ಫೈಟರ್ ಸ್ಕ್ವಾಡ್ರನ್‌ನಲ್ಲಿ ನಿಯೋಜನೆಗೊಂಡಿದ್ದ ಅವರು ಮಿಗ್-21 ಬೈಸಾನ್ ಯುದ್ಧ ವಿಮಾನದ ಹಾರಾಟ ನಡೆಸುತ್ತಿದ್ದರು. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಯುದ್ಧವಿಮಾನಗಳ ಪೈಲಟ್‌ಗಳಾಗಿ ಮೂವರು ಮಹಿಳೆಯರು ಸೇರ್ಪಡೆಗೊಂಡರು.
- Advertisement -