Friday, May 3, 2024
spot_imgspot_img
spot_imgspot_img

ಗೋಳ್ತಮಜಲು: ಮಾ( 14 -19 )ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನಿಟಿಲಾಪುರದಲ್ಲಿ ವರ್ಷಾವಧಿ ಜಾತ್ರಾಮಹೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವ

- Advertisement -G L Acharya panikkar
- Advertisement -

ಗೋಳ್ತಮಜಲು: ಮೊಗರ್ನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನಿಟಿಲಾಪುರ ಶ್ರೀ ದೇವರ ವರ್ಷಾವಧಿ ಜಾತ್ರಾಮಹೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವವು ಮಾ: 14 ರಿಂದ 19 ರವರೆಗೆ ನಡೆಯಲಿದೆ.

ದಿನಾಂಕ: 14-03-2024 ನೇ ಗುರುವಾರ ಪೂರ್ವಾಹ್ನ ಶ್ರೀ ದುರ್ಗಾಲಯ ದೈವಸ್ಥಾನದಿಂದ ಶ್ರೀ ದುರ್ಗಾಲಯ,ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ಭಂಡಾರ ಆಗಮನ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 12:00 ರಿಂದ ಮಹಾಪೂಜೆ, ಧ್ವಜಾರೋಹಣ, ನಿತ್ಯ ಬಲಿ, ಅನ್ನ ಸಂತರ್ಪಣೆ ನಡೆದು ಬಳಿಕ ಸಂಜೆ 6:00 ರಿಂದ ಭಕ್ತಾದಿಗಳಿಂದ ಭಜನಾ ಸೇವೆ ನಂತರ ರಾತ್ರಿ 8:00 ರಿಂದ ಬಲಿ ಉತ್ಸವ, ಕಾರಂತರಕೋಡಿ ಶ್ಯಾನುಭಾಗರ ಕಟ್ಟೆಗೆ ಸವಾರಿ ನಡೆಯಲಿದೆ.

ದಿನಾಂಕ: 15-03-2024 ನೇ ಶುಕ್ರವಾರ ಬೆಳಿಗ್ಗೆ 7:30 ದೀಪದ ಬಲಿ ಉತ್ಸವ ನಡೆಯಲಿದೆ. ಮಧ್ಯಾಹ್ನ 12:00ರಿಂದ ಮಹಾಪೂಜೆ, ಅನ್ನ ಸಂತರ್ಪಣೆ ನಂತರ ಸಂಜೆ 6:00 ರಿಂದ ಭಕ್ತಾದಿಗಳಿಂದ ಭಜನಾ ಸೇವೆ ನಡೆದು ನಂತರ ರಾತ್ರಿ 8:00 ರಿಂದ ಬಲಿ ಉತ್ಸವ ಬೊಮ್ಮನಕೋಡಿ ಕಟ್ಟೆಗೆ ಸವಾರಿ ನಡೆಯಲಿದೆ.

ದಿನಾಂಕ: 16-03-2024 ನೇ ಶನಿವಾರ ಬೆಳಿಗ್ಗೆ 7:30 ರಿಂದ ದೀಪದ ಬಲಿ ಉತ್ಸವ ನಡೆದು ಮಧ್ಯಾಹ್ನ 12:00 ರಿಂದ ಮಹಾಪೂಜೆ, ಅನ್ನಸಂತರ್ಪಣೆ ನಂತರ ಸಂಜೆ 6:00 ರಿಂದ ಭಕ್ತಾದಿಗಳಿಂದ ಭಜನಾ ಸೇವೆ ನಡೆದು ನಂತರ ರಾತ್ರಿ 8:00 ರಿಂದ ನಡು ಬಲಿ ಉತ್ಸವ , ಚಂದ್ರಮಂಡಲ ಉತ್ಸವ, ಬಟ್ಟಲು ಕಾಣಿಕೆ, ಪಿಲಿಂಜ ಕಟ್ಟೆಗೆ ಸವಾರಿ, ಉಯ್ಯಾಲೋತ್ಸವ,ದುರ್ಗಾಲಯ ದೈವದ ನೇಮೋತ್ಸವ ನಡೆಯಲಿದೆ.

ದಿನಾಂಕ: 17-03-2024 ನೇ ಆದಿತ್ಯವಾರ ಬೆಳಿಗ್ಗೆ 7:30 ರಿಂದ ದೀಪದ ಬಲಿ ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ತಪ್ಪಂಗಾಯಿ ನಡೆದು ಬಳಿಕ ಮಧ್ಯಾಹ್ನ12:00 ಮಹಾಪೂಜೆ ನಂತರ 1:30 ಮಹಾಪ್ರಸಾದ ಬಳಿಕ ರಾತ್ರಿ 8:00 ರಿಂದ ಶ್ರೀ ಮನ್ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ ಬಟ್ಟಲು ಕಾಣಿಕೆ, ಬಲಿನ ಉತ್ಸವ ಶಯನೋತ್ಸವ ನಡೆಯಲಿದೆ.

ದಿನಾಂಕ: 18-03-2024 ನೇ ಸೋಮವಾರ ಬೆಳಿಗ್ಗೆ ಶ್ರೀ ದೇವರ ಕವಾಟೋದ್ಘಾಟನೆ, ’ತುಲಾಭಾರ ಸೇವೆ ನಡೆದು ಮಧ್ಯಾಹ್ನ 12:00 ರಿಂದ ಮಹಾಪೂಜೆ, ಅನ್ನ ಸಂತರ್ಪಣೆ ಬಳಿಕ ಸಾಯಂಕಾಲ 4:00 ರಿಂದ ಅವಭೃತ ಬಲಿ,ವಸಂತ ಕಟ್ಟೆಯಲ್ಲಿ ಪೂಜೆ, ಓಕುಳಿ ಪ್ರಸಾದ, ಅವಭೃತ ಸವಾರಿ ನಡೆಯಲಿದೆ.

ದಿನಾಂಕ: 19-03-2024 ನೇ ಮಂಗಳವಾರ ಮಧ್ಯಾಹ್ನ 12:00 ರಿಂದ ಮಹಾಪೂಜೆ ಬಳಿಕ ಶ್ರೀ ದೇವರ ಸನ್ನಿಧಿಯಲ್ಲಿ ಪಿಲಿಚಾಮಂಡಿ ಮತ್ತು ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ.

- Advertisement -

Related news

error: Content is protected !!