Saturday, October 3, 2026
spot_imgspot_img
spot_imgspot_img

ಲಿಂಗ ಬದಲಾವಣೆಗೆ ಒಪ್ಪದ ತಾಯಿಯ ಬರ್ಬರ ಹತ್ಯೆ – ಅಪ್ರಾಪ್ತರಿಗೆನೀಡುವ ಶಿಕ್ಷೆಯ ಬಗ್ಗೆ ಚಾಟ್‌ ಜಿಪಿಟಿಯಲ್ಲಿ ಸರ್ಚ್‌ ಮಾಡಿದ್ದ ಬಾಲಕ!

- Advertisement -
- Advertisement -

ಲಕ್ನೋ: ತನ್ನ ಲಿಂಗ ಬದಲಾವಣೆಗೆ ಒಪ್ಪದ ತಾಯಿಯನ್ನು ಅಪ್ರಾಪ್ತ ಮಗನೇ ಬರ್ಬರವಾಗಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದ್ದು, ಕೊಲೆಗೆ ರೂಪಿಸಿದ್ದ ಸಂಚು ಆತನ ಡೈರಿಯಿಂದ ಬಯಲಾಗಿದೆ.

17 ವರ್ಷದ ಬಾಲಕ ತನ್ನನ್ನು ತಾನು ಮಹಿಳೆ ಎಂದು ಗುರುತಿಸಿಕೊಳ್ಳುತ್ತಿದ್ದ. ಇದಕ್ಕೆ ಆತನ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.

ಗುರುವಾರ (ಅ.1) ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ವಿಚಾರವಾಗಿ ಮನೆಯಲ್ಲಿ ತೀವ್ರ ಗಲಾಟೆಯಾಗಿದೆ. ಈ ವೇಳೆ ಶಸ್ತ್ರಚಿಕಿತ್ಸೆಯ ಬದಲಿಗೆ ವೈದ್ಯಕೀಯ ಮತ್ತು ಮಾನಸಿಕ ಸಮಾಲೋಚನೆಯನ್ನು (ಕೌನ್ಸೆಲಿಂಗ್) ಆಯ್ಕೆ ಮಾಡಿಕೊಳ್ಳುವಂತೆ ಆತನ ತಾಯಿ ಮತ್ತೊಮ್ಮೆ ಸಲಹೆ ನೀಡಿದ್ದರು. ಇದರಿಂದ ಕೋಪಗೊಂಡ ಬಾಲಕ ಮೊದಲೇ ತಂದಿದ್ದ ವ್ರೆಂಚ್‌ನಿಂದ (ಸ್ಪ್ಯಾನರ್) ತಾಯಿಯ ತಲೆಯ ಮೇಲೆ ಹಲವಾರು ಬಾರಿ ಹೊಡೆದಿದ್ದಾನೆ. ಇದರಿಂದ ಸ್ಥಳದಲ್ಲೇ ತಾಯಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ನಂತರ, ಬಾಲಕ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ನಾಕಾ ಹಿಂದೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಮಹಿಳೆ ಫ್ಲಾಟ್‌ನೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಾಲಕ ಕೂಡ ಸ್ಥಳದಲ್ಲೇ ಇದ್ದ. ವಿಚಾರಣೆಯ ಸಮಯದಲ್ಲಿ ಬಾಲಕ ಕೊಲೆಗೈದಿದ್ದನ್ನು ಒಪ್ಪಿಕೊಂಡಿದ್ದಾನೆ.

ಹತ್ಯೆಗೆ ಸಂಬಂಧಿಸಿದ ಯೋಜನೆಗಳು ಆತನ ಡೈರಿಯಲ್ಲಿ ಪತ್ತೆಯಾಗಿವೆ. ಅದರಲ್ಲಿ ವ್ರೆಂಚ್ (ಸ್ಪ್ಯಾನರ್), ಮೆಣಸಿನ ಪುಡಿ ಮತ್ತು ಬಿಸಿ ನೀರನ್ನು ಬಳಸುವ ಬಗ್ಗೆ ಉಲ್ಲೇಖಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಗೆ ಬಳಸಲಾದ ವ್ರೆಂಚ್ ಮತ್ತು ಇತರ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹತ್ಯೆಯ ನಂತರದ ಕಾನೂನು ಪ್ರಕ್ರಿಯೆಗಳ ಬಗ್ಗೆ, ಅಂದರೆ ಪೊಲೀಸ್ ಕ್ರಮ, ಅಪ್ರಾಪ್ತ ಆರೋಪಿಗೆ ವಿಧಿಸಬಹುದಾದ ಶಿಕ್ಷೆ ಮತ್ತು ಅವರನ್ನು ಎಲ್ಲಿಗೆ ಕಳುಹಿಸಲಾಗುತ್ತದೆ ಎಂಬ ಮಾಹಿತಿಯನ್ನು ಪಡೆಯಲು ಬಾಲಕ ‘ಚಾಟ್‌ಜಿಪಿಟಿ’ ಬಳಸಿದ್ದ ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ.

ಬಾಲಕ ಏಕಾಂತವನ್ನು ಬಯಸುತ್ತಿದ್ದನು ಮತ್ತು ಪೋಷಕರು ಪ್ರೀತಿಯಿಂದ ಮೈಮುಟ್ಟಿ ಮುದ್ದಾಡುವುದನ್ನೂ ಸಹ ಆತ ಇಷ್ಟಪಡುತ್ತಿರಲಿಲ್ಲ. ಬಾಲಕನಿಗಾಗಿ ಅವನ ತಂದೆ ಲಕ್ನೋದಲ್ಲಿ ಪ್ರತ್ಯೇಕ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಅಲ್ಲಿಗೆ ಕುಟುಂಬದ ಯಾರೂ ಭೇಟಿ ನೀಡಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು. ಆದರೆ, ಮಗ ತನ್ನೊಂದಿಗೇ ವಾಸಿಸಬೇಕೆಂದು ತಾಯಿ ಬಯಸಿದ್ದರು ಎಂಬುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!