Wednesday, October 21, 2026
spot_imgspot_img
spot_imgspot_img

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅವಳಿ ಮಕ್ಕಳನ್ನು ಕೊಂದ ತಾಯಿ

- Advertisement -
- Advertisement -

ಜೈಪುರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅವಳಿ ಮಕ್ಕಳನ್ನು ತಾಯಿ ಕೊಲೆ ಮಾಡಿರುವ ಘಟನೆ ದೀಗ್ ಜಿಲ್ಲೆಯ ಬದೇಸ್ರಾ ಗ್ರಾಮದಲ್ಲಿ ನಡೆದಿದೆ.

ವಿನಯ್ ಮತ್ತು ವಿಷ್ಣು ಚೌಧರಿ ಕೊಲೆಯಾದ ಮಕ್ಕಳು. ಮಂಗಳವಾರ ಮುಂಜಾನೆ ಇಬ್ಬರೂ ಮನೆಯಿಂದ ಹೊರಹೋಗಿದ್ದರು. ಎಷ್ಟೊತ್ತಾದರೂ ಇಬ್ಬರು ವಾಪಸ್‌ ಬಾರದಿದ್ದಾಗ, ಅವರ ತಾಯಿಯ ಸಹೋದರಿ ಹುಡುಕಾಟ ನಡೆಸಿದ ವೇಳೆ ಮನೆಯ ಸಮೀಪವಿರುವ ಜಾಗವೊಂದರಲ್ಲಿ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಅವಳಿ ಮಕ್ಕಳ ಕುತ್ತಿಗೆಯನ್ನು ಸೀಳಲಾಗಿತ್ತು. ಅವರ ತಲೆಯ ಮೇಲೆ ಗಾಯದ ಗುರುತುಗಳಿವೆ ಎಂದು ಡೀಗ್ ಪೊಲೀಸ್ ಅಧೀಕ್ಷಕ ತಿಳಿಸಿದ್ದಾರೆ.

ಪ್ರೀತಿ ಎಂಬ ಮಹಿಳೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಆಕೆಯ ಸೂಚನೆಯ ಮೇರೆಗೆ, ಲವ್ವರ್‌ ಮತ್ತು ಆಕೆಯ 16 ವರ್ಷದ ಹಿರಿಯ ಮಗ ಸೇರಿ ಈ ಕೊಲೆಗಳನ್ನು ಮಾಡಿದ್ದಾರೆ. ಮೂವರನ್ನೂ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಆರೋಪಿ ಮಹಿಳೆಯು ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಆಕೆಯ ಇಬ್ಬರು ಅವಳಿ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಆಕೆಯ ಹಿರಿಯ ಮಗ ಮಾತ್ರ ಅಕ್ರಮ ಸಂಬಂಧಕ್ಕೆ ಬೆಂಬಲವಾಗಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!