- Advertisement -
- Advertisement -
ಮುಂಬೈ: ಬಳಕೆಯಾದ ಮಾಸ್ಕ್ ಗಳಿಂದ ಹಾಸಿಗೆ ತಯಾರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ತಯಾರಕನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಾರಾಷ್ಟ್ರದ ಜಲ್ಗಾಂವ್ನ ಕುಸುಂಭ ನಾಕಾದಲ್ಲಿ ಇಂತಹ ಮಾಸ್ಕ್ ಹಾಸಿಗೆಗಳನ್ನು ತಯಾರಿಸಲಾಗುತ್ತಿದೆ.
ಬಳಕೆಯಾದ ಮಾಸ್ಕ್ಗಳಿಂದ ಹಾಸಿಗೆ ತಯಾರಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ಅಂಗಡಿಯ ಮೇಲೆ ದಾಳಿ ನಡೆಸಿದ್ದು, ಜಲ್ಗಾಂವ್‌ನ ಆಜಾದ್ ನಗರ ನಿವಾಸಿ ಅಂಗಡಿ ಮಾಲೀಕ ಅಮ್ಜದ್ ಅಹ್ಮದ್ ಮನ್ಸೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ ಎಲ್ಲರೂ ಮಾಸ್ಕ್ ಬಳಸುತ್ತಿದ್ದು, ಹೀಗೆ ಬಳಸಿ ಬಿಸಾಡಿದ ಮಾಸ್ಕ್ಗಳನ್ನು ಸಂಗ್ರಹಿಸಿ ಅದರಿಂದ ಹಾಸಿಗೆ ತಯಾರಿಸಲಾಗುತ್ತಿತ್ತು.

- Advertisement -








