- Advertisement -
- Advertisement -






ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ನೀಡಿದ್ದ 14 ಸೈಟ್‌ಗಳ ಖಾತಾವನ್ನು ಮುಡಾ ರದ್ದು ಮಾಡಿದೆ. ಸೋಮವಾರ ತಡರಾತ್ರಿಯಷ್ಟೇ ಸಿಎಂ ಪತ್ನಿ ಸೈಟ್‌ಗಳನ್ನು ಹಿಂದಿರುಗಿಸಿ ಪತ್ರ ಬರೆದಿದ್ದರು. ಒಂದೇ ದಿನದಲ್ಲಿ ಸೈಟ್ ಹಿಂದಕ್ಕೆ ಸ್ವೀಕಾರ ಮಾಡಲಾಗಿದೆ.
ಖುದ್ದು ಸಿಎಂ ಪತ್ನಿ ಪಾರ್ವತಿ ಅವರೇ ಇಂದು(ಅಕ್ಟೋಬರ್ 01) ಮೈಸೂರಿನ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ ಒಟ್ಟು 14 ಮುಡಾ ನಿವೇಶನಗಳ ಖಾತೆ ರದ್ದು ಮಾಡಿಸಿದ್ದಾರೆ.
ಈ ಸಂಬಂಧ ಮುಡಾ ಆಯುಕ್ತರ ರಘುನಂದನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 14 ನಿವೇಶನಗಳು ಮುಡಾಗೆ ವಾಪಸ್ ಆಗಿದ್ದು, ಈಗ 14 ಸೈಟ್‌ಗಳ ಕ್ರಯಪತ್ರ ರದ್ದಾಗಿದೆ. ಅವರು ಸ್ವಇಚ್ಛೆಯಿಂದ ಬಂದು ಕೊಟ್ಟಿದ್ದಕ್ಕೆ ನಾವು ಸ್ವೀಕರಿಸಿದ್ದೇವೆ. ಇದನ್ನ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.
- Advertisement -








