Saturday, June 6, 2026
spot_imgspot_img
spot_imgspot_img

ಮುಡಿಪು: ಇಪ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಹಿಂ.ಜಾ.ವೇ.ಯಿಂದ ಚುನಾವಣಾ ಆಯೋಗ ಹಾಗೂ ಪೋಲಿಸ್ ಅಯುಕ್ತರಿಗೆ ದೂರು..!

- Advertisement -
- Advertisement -

ಚುನಾವಣಾ ನೀತಿ ಸಂಹಿತೆಯನ್ನು ಈಗಾಗಲೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಜಾರಿಗೆಗೊಳಿಸಲಾಗಿದ್ದು ಇದನ್ನು ಉಲ್ಲಂಘಿಸಿ ದಿನಾಂಕ 29/03/2024ಶುಕ್ರವಾರದಂದು ಸಮಯ ಸುಮಾರು ಸಾಯಂಕಾಲ 6 :00 ಗಂಟೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯ ಮುಡಿಪು ಪೇಟೆಯ ಮುಖ್ಯ ರಸ್ತೆಯ ಕೂಡುರಸ್ತೆಯನ್ನು ತಡೆಮಾಡಿ ಒಂದು ಸಮುದಾಯದ ಅನ್ಯರಾಜ್ಯದ ವ್ಯಕ್ತಿಗಳ ಜೋತೆಗೂಡಿ ಇಪ್ತಾರ್ ಕೂಟವನ್ನು ನಡೆಸಿರುತ್ತಾರೆ.

ಇದು ಸಂಜೆಯ ಸಮಯದಲ್ಲಿ ಮನೆಗೆ ತೆರಳುವ ಮಕ್ಕಳು ಮಹಿಳೆಯರಿಗೆ ತುಂಬಾ ತೊಂದರೆಯನ್ನುಂಟು ಮಾಡಿದೆ. ಹಾಗೂ ರಸ್ತೆಯಲ್ಲಿ ವಾಹನ ಬೊಜನ ಕೂಟದ ಟೇಬಲ್ ನಡುರಸ್ತೆಯಲ್ಲಿಟ್ಟು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.‌ ಆದುದರಿಂದ ತಾವು ಚುನಾವಣಾ ಆಯೋಗ, ಪೋಲಿಸ್ ಆಯುಕ್ತರು ದಯಮಾಡಿ ಈ ಕೂಡಲೇ ಇದರ ಬಗ್ಗೆ ಮೊಕದ್ದಮೆ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದು ಜಾಗರಣ ವೇದಿಕೆ ಮುಡಿಪು ವಲಯ ಈ ಮೂಲಕ ಆಗ್ರಹಿಸಿದೆ.

- Advertisement -

Related news

error: Content is protected !!