Saturday, May 18, 2024
spot_imgspot_img
spot_imgspot_img

ಕಲ್ಲಡ್ಕ: ಸ್ವಾತಂತ್ರ್ಯ ದಿನಾಚರಣೆಯಂದು ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿಗೆ ಸ್ಮರಣಿಕೆ ನೀಡಿದ ಕಲ್ಲಡ್ಕ ವಸ್ತು ಸಂಗ್ರಹಾಲಯದ ಸ್ಥಾಪಕ ಮಹಮ್ಮದ್ ಯಾಸಿರ್

- Advertisement -G L Acharya panikkar
- Advertisement -

ಕಲ್ಲಡ್ಕ: 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಲ್ಲಡ್ಕ ವಸ್ತು ಸಂಗ್ರಹಾಲಯದ ಸ್ಥಾಪಕ ಮಹಮ್ಮದ್ ಯಾಸಿರ್ ಅವರನ್ನು ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸಲು ಮಹಮ್ಮದ್ ಯಾಸಿರ್ ಅವರು ಕಾಲೇಜಿಗೆ ಸುಂದರವಾದ ಸ್ಮರಣಿಕೆಯನ್ನು ಹಸ್ತಾಂತರಿಸಿದರು. ಸ್ಮರಣಿಕೆಯು ಎರಡು 10 ರೂಪಾಯಿ ಭಾರತೀಯ ಕರೆನ್ಸಿ ನೋಟುಗಳ 15.08.1947 ಮತ್ತು 26.01.1950 ಸರಣಿ ಸಂಖ್ಯೆಗಳನ್ನು ಹೊಂದಿದೆ. ಈ ಎರಡು ವಿಶೇಷ ದಿನಾಂಕಗಳು ಭಾರತದ ಇತಿಹಾಸದಲ್ಲಿ ನಡೆದ ಎರಡು ಪ್ರಮುಖ ಘಟನೆಗಳನ್ನು ನೆನಪಿಸುತ್ತದೆ.

ಮಹಮ್ಮದ್ ಯಾಸಿರ್ ಅವರ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಬೋಧಕ – ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿನಿಯರು ಪ್ರಶಂಸಿದರು.

Insta: glacharyajewellers
Fb: glacharya
- Advertisement -

Related news

error: Content is protected !!