


ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ(ರಿ.) ಮುಳಿಯ ಇಲ್ಲಿ 25ನೇ ವಾರ್ಷಿಕೋತ್ಸವವು ಡಿ.30 ಮತ್ತು 31 ರಂದು ಬ್ರಹ್ಮಶ್ರೀ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಗುರುಸ್ವಾಮಿ ಮಧೂರು ಇವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ದಿನಾಂಕ 30-12-2023ನೇ ಶನಿವಾರ ಪ್ರಾತಃಕಾಲ ಗಂಟೆ 5 ಕ್ಕೆ ದೀಪ ಪ್ರತಿಷ್ಠೆ ಹಾಗೂ ಗಣಪತಿ ಹೋಮ, ಬೆಳಿಗ್ಗೆ ಗಂಟೆ 6.30ರಿಂದ ಏಕಾಹ ಭಜನಾ ಪ್ರಾರಂಭ, ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ದಿನಾಂಕ 31-12-2023ನೇ ಆದಿತ್ಯವಾರ ಬೆಳಿಗ್ಗೆ ಏಕಾಹ ಭಜನಾ ಮಂಗಳೋತ್ಸವ ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಪ್ರಾರಂಭಗೊಳ್ಳಲಿದೆ. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಶ್ರೀ ಶಾಸ್ತಾ ಕಲಾವೇದಿಕೆಯ ಉದ್ಘಾಟನೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರವಿರಾಜ್ ಮತ್ತು ಬಳಗ, ಏಳ್ಕಾನ ಇವರಿಂದ ’ಕುಣಿತ ಭಜನಾ ಕಾರ್ಯಕ್ರಮ’, ಸಂಜೆ ಸಂತ ಭದ್ರಗಿರಿ ಅಚ್ಚುತದಾಸರ ಶಿಷ್ಯರಾದ ರವಿದಾಸ್ ಚಿತ್ರಮೂಲ ಇವರಿಂದ ಹರಿಕಥಾ ಕಾರ್ಯಕ್ರಮ’ ನಡೆಯಲಿದೆ. ಸಂಜೆ 5ರಿಂದ ದಿವ್ಯನಿಧಿ ರೈ ಇವರಿದ ’ಸಂಗೀತ ರಸ ಸಂಜೆ’ ನಡೆಯಲಿದೆ.
ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಯನ್ ಮಹಾಲಿಂಗ ಭಟ್ ಬಿಲ್ಲಂಪದವು, ಕರ್ನಾಟಕ ಹೈಕೋರ್ಟ್‌ನ ಅಡ್ವಕೇಟ್ ಜಗನ್ನಾಥ ಆಳ್ವ ಮಿತ್ತಳಿಕೆ, ಸಂತೋಷ್ ಕುಮಾರ್ ಶೆಟ್ಟಿ ಪೆಲತ್ತಡ್ಕ shelter Associates consulting civil engineer contractor, vittal, ಭಾಗವಹಿಸಲಿದ್ದಾರೆ.
ರಾತ್ರಿ ಗಂಟೆ 8ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಬಳಿಕ ಪ್ರಸಾದ ಭೋಜನ ನಡೆಯಲಿದೆ. ರಾತ್ರಿ ಗಂಟೆ 8.30 ರಿಂದ ಶ್ರೀ ಶಾಸ್ತಾ ಯಕ್ಷ ಕಲಾ ವೃಂದ ಮುಳಿಯ ಇದರ ಬಾಲಪ್ರತಿಭೆಗಳಿಂದ ಯಕ್ಷಗಾನ ’ಏಕಾದಶಿ ದೇವಿ ಮಹಾತ್ಮೆ’ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.