- Advertisement -
- Advertisement -


ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಡಿವೈಡರ್’ಗೆ ಬೈಕ್ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ 4.30 ಸುಮಾರಿಗೆ ನಡೆದಿದೆ. ಮೃತ ಯುವಕನನ್ನು ಮುಲ್ಕಿ ಸಮೀಪದ ಚಿತ್ರಾಪು ಉಮಾ ನಿವಾಸ ಬಳಿಯ ನಿವಾಸಿ ಗಣೇಶ ಆರ್ ದೇವಾಡಿಗ (25) ಎಂದು ಗುರುತಿಸಲಾಗಿದೆ.
ಮೃತ ಯುವಕ ಗಣೇಶ್ ಸುರತ್ಕಲ್ ಸಮೀಪದ ಎನ್‌ಐಟಿಕೆಯ ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದು ಬೆಳಿಗ್ಗೆ 4.30 ಗಂಟೆಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಬೈಕ್ಚಾ ಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಂದರ್ಭ ಕೂಡಲೇ ಹಳೆಯಂಗಡಿಯ ರಿಕ್ಷಾ ಚಾಲಕ ಯೋಗೀಶ ಮತ್ತು ಆಂಬುಲೆನ್ ಮುಖಾಂತರ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಗಣೇಶ್ ಮೃತಪಟ್ಟಿದ್ದಾರೆ.

ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತೀವ್ರ ಬಡತನ ಕುಟುಂಬದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ರಮೇಶ್ ದೇವಾಡಿಗ ರವರ ಇಬ್ಬರು ಪುತ್ರರಲ್ಲಿ ಹಿರಿಯ ಪುತ್ರ ಗಣೇಶ್ ದೇವಾಡಿಗರಾಗಿದ್ದಾರೆ.


- Advertisement -