Thursday, April 25, 2024
spot_imgspot_img
spot_imgspot_img

ಮುಲ್ಕಿ: ಅಕ್ರಮ ಸಂಬಂಧ ಆರೋಪ: ಸರಕಾರಿ ನೌಕರನೊಬ್ಬನ ವಿರುದ್ಧ ಆತನ ಪತ್ನಿ ದೂರು.!

- Advertisement -G L Acharya panikkar
- Advertisement -

ಮಂಗಳೂರು: ಸರಕಾರಿ ಹಾಸ್ಟೆಲ್​​​​​​ನಲ್ಲಿ ಅಡುಗೆ ಕೆಲಸದಲ್ಲಿರುವವನ ಅಕ್ರಮ ಸಂಬಂಧದ ಬಗ್ಗೆ ಮತ್ತು ಸರಕಾರಿ ಸ್ವತ್ತುಗಳನ್ನೇ ಮಾರಾಟಕ್ಕೆ ಸಂಬಂಧಿಸಿದಂತೆ ಪಡು ಪಣಂಬೂರು ಗ್ರಾಮದ ನಿವಾಸಿ ಆತನ ಪತ್ನಿಯೇ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಲ್ಕಿಯಲ್ಲಿರುವ ಸರ್ಕಾರಿ ಹಾಸ್ಟೆಲ್​​​ನಲ್ಲಿ ನೌಕರನಾಗಿರುವ ಈತ, ಸರ್ಕಾರ ಹಾಸ್ಟೆಲ್ ಮಕ್ಕಳಿಗೆ ನೀಡಿರುವ ಹೊದಿಕೆಗಳನ್ನು ಕದ್ದೊಯ್ದು ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನೀಡಿದ್ದಾನೆ. ಕೆಲವನ್ನು ಮಾರಾಟ ಮಾಡಿದ್ದು, ಮನೆಗೂ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಆತನ‌ ವಿರುದ್ಧ ಕಿರುಕುಳ, ಜೀವಬೆದರಿಕೆ ದೂರನ್ನೂ ದಾಖಲಿಸಿದ್ದಾರೆ.

ಮುಲ್ಕಿಯ ಪಡು ಪಣಂಬೂರು ನಿವಾಸಿ ತೇಜಾಕ್ಷಿ ಎಂಬುವರು ಪತಿ ಕೊರಗಪ್ಪ ಪೂಜಾರಿ ವಿರುದ್ಧ ದೂರು ನೀಡಿರುವವರು. ಪತಿಯು ಇನ್ನೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕೆಲಸ ಮಾಡುವ ಹಾಸ್ಟೆಲ್‌ಗೆ ಆ ಮಹಿಳೆ ತಹಶೀಲ್ದಾರ್ ಸೋಗಿನಲ್ಲಿ ತೆರಳಿ, ಅಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆಕೆ ದೂರಿನಲ್ಲಿ‌‌ ಆರೋಪಿಸಿದ್ದಾರೆ. ಅಲ್ಲದೆ ಹಾಸ್ಟೆಲ್​​ಗೆ ತರುವ ಅಡುಗೆ ಸಾಮಗ್ರಿಗಳನ್ನೂ ಕೂಡ ಕದ್ದು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ಅನೈತಿಕ ಸಂಬಂಧ, ಸರ್ಕಾರಿ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ‌.

- Advertisement -

Related news

error: Content is protected !!