- Advertisement -
- Advertisement -
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿರುವ ಕಾರೆಣ ಈ ಭಾಗದ ಪ್ರವಾಸಿ ತಾಣಗಳಿಗೆ ಬರುವ ವಿವಿಧ ಭಾಗಗಳ ಪ್ರವಾಸಿಗರಿಗೆ ಒಂದು ವಾರಗಳ ಕಾಲ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಒಮ್ಮೆ ಬಿಸಿಲು. ಮತ್ತೊಮ್ಮೆ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಒಟ್ಟಾರೆ ಹಿಂಗಾರು ಮಳೆಯ ಅಬ್ಬರಕ್ಕೆ ಕಾಫಿನಾಡಿನ ಜನ ಕಂಗಾಲಾಗಿದ್ದಾರೆ. ಇದರ ನಡುವೆ ಮಳೆ ಅಬ್ಬರಕ್ಕೆ ಮತ್ತೆ ಬೆಟ್ಟ-ಗುಡ್ಡ-ಧರೆ ಕುಸಿಯುವ ಭೀತಿಯಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ಒಂದು ವಾರ ಪ್ರವಾಸ ಮುಂದೂಡುವಂತೆ ಸೂಚಿಸಿದೆ.
ಮಳೆಯಿಂದ ಏಕಾಏಕಿ ಹಳ್ಳಗಳು ಬರ್ತಿಯಾಗುತ್ತಿವೆ. ರಸ್ತೆಗಳು ಜಲಾವೃತವಾಗುತ್ತಿವೆ. ಅವಾಂತರಗಳಾಗುವ ಆತಂಕದಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ಈ ಸೂಚನೆ ನೀಡಿದೆ.
- Advertisement -