Tuesday, July 1, 2025
spot_imgspot_img
spot_imgspot_img

11 ವರ್ಷ ಕಾರ್ಯನಿರ್ವಹಿಸಿದ್ದ “ಸ್ಪೈಕ್” ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

- Advertisement -
- Advertisement -

ಮುಂಬೈ: ನಾಸಿಕ್ ಸಿಟಿ ಪೊಲೀಸ್ ಪಡೆ ಮತ್ತು ಬಾಂಬ್ ಪತ್ತೆದಳದಲ್ಲಿ 11 ವರ್ಷ ಕಾರ್ಯನಿರ್ವಹಿಸಿದ್ದ ‘ಸ್ಪೈಕ್’ ಹೆಸರಿನ ಶ್ವಾನವೊಂದಕ್ಕೆ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟ ಘಟನೆ ನಾಸಿಕ್ ನಲ್ಲಿ ನಡೆದಿದೆ.

ಕರ್ತವ್ಯದಿಂದ ನಿವೃತ್ತಿ ಹೊಂದಿ ಶ್ವಾನವನ್ನು ಪೊಲೀಸ್ ವ್ಯಾನ್‍ನ ಬಾನೆಟ್‍ನಲ್ಲಿ ಕೂರಿಸಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ವಾಹನವನ್ನು ಬಲೂನ್ ಮತ್ತು ಹೂವಿನಿಂದ ಶೃಂಗಾರ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕವಾಗಿ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

ಸ್ಪೈಕ್ ಕೂಡ ಶಾಂತವಾಗಿ ಕುಳಿತು ಮೆರವಣಿಗೆಯಲ್ಲಿ ಸಾಗಿದೆ. ವೃತ್ತಿಜೀವನದ ಹಂತವನ್ನು ಮುಗಿಸಿ ನಿವೃತ್ತಿ ಜೀವನದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯಲಿದೆ. ಕಷ್ಟಪಟ್ಟು ನಿಯತ್ತಿನಿಂದ ಕೆಲಸ ಮಾಡಿರುವ ಶ್ವಾನದ ಕಾರ್ಯಕ್ಕೆ ಸಿಬ್ಬಂದಿ ಮೆಚ್ಚುಗೆಯ ಮಾತುಗಳನ್ನಾಡಿ ಕೇಕ್ ಕತ್ತರಿಸಿ ಬೀಳ್ಕೊಟ್ಟು ಸಂಭ್ರಮಿಸಿದ್ದಾರೆ. ಗೋಲ್ಡನ್ ಲ್ಯಾಬ್ರಡಾರ್ 2010 ರಲ್ಲಿ ನಾಸಿಕ್ ಬಾಂಬ್ ಡಿಟೆಕ್ಷನ್ ಡಾಗ್ ಸ್ಕ್ವಾಡ್‍ಗೆ ಸೇರಿತ್ತು. ಗುಪ್ತ ಪೆಟ್ರೋಲ್ ಬಾಂಬ್‍ಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನವು ಅತ್ಯಂತ ಪರಿಣತಿಯನ್ನು ಹೊಂದಿತ್ತು.

- Advertisement -

Related news

error: Content is protected !!