Friday, March 29, 2024
spot_imgspot_img
spot_imgspot_img

ಐಷಾರಾಮಿ ಹಡಗಿನಲ್ಲಿ ರೇವ್​ ಪಾರ್ಟಿ; ಬಾಲಿವುಡ್​ ಸ್ಟಾರ್​ ನಟನ ಪುತ್ರ ಎನ್​ಸಿಬಿ ಬಲೆಗೆ!

- Advertisement -G L Acharya panikkar
- Advertisement -

ಮುಂಬೈ: ಸಮುದ್ರ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ರೇವ್​ ಪಾರ್ಟಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಎನ್​ಸಿಬಿ ಅಧಿಕಾರಿಗಳ ಬಲೆಗೆ ಹೈಪ್ರೊಫೈಲ್​ ವ್ಯಕ್ತಿಗಳ ಮಕ್ಕಳು ಸಿಕ್ಕಿ ಬಿದ್ದಿದ್ದಾರೆ. ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ.

ಬಾಲಿವುಡ್​ ಸ್ಟಾರ್​ ನಟ ಶಾರುಖ್​ ಖಾನ್​ ಅವರ ಪುತ್ರ ಆರ್ಯನ್​ ಖಾನ್​ ಅವರು ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಬಗ್ಗೆ ಮಾಹಿತಿ ಕೇಳಿಬಂದಿದೆ. ಆ ವೇಳೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ‌ ಮೇಲೆ ಎನ್‌ಸಿಬಿ ದಾಳಿ; 10 ಮಂದಿಯ ಬಂಧನ

ಆರ್ಯನ್ ಖಾನ್​ ಮೊಬೈಲ್​ ಫೋನ್​ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿನ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.

driving
- Advertisement -

Related news

error: Content is protected !!