Tuesday, May 14, 2024
spot_imgspot_img
spot_imgspot_img

ರಸ್ತೆಬದಿ ನಿಲ್ಲಿಸಿದ್ದ ಟೆಂಪೋದೊಳಗೆ ಮಹಿಳೆಯ ಬರ್ಬರ ಅತ್ಯಾಚಾರ!

- Advertisement -G L Acharya panikkar
- Advertisement -
driving

ಮುಂಬೈ: ರಸ್ತೆಬದಿ ನಿಲ್ಲಿಸಿದ್ದ ಟೆಂಪೋದೊಳಗೆ ಮಹಿಳೆಯನ್ನು ಅತ್ಯಾಚಾರವೆಸಗಿ ಕಬ್ಬಿಣದ ಸಲಾಕೆಯಿಂದ ಹಿಂಸಿಸಿರುವ ಭಯಾನಕ ಘಟನೆ ಶುಕ್ರವಾರ ಬೆಳಗ್ಗೆ ಮುಂಬೈನ ಸಾಕಿನಾಕ ಸಬ್ ​ಅರ್ಬನ್​ ಪ್ರದೇಶದಲ್ಲಿ ನಡೆದಿದೆ.

ಶುಕ್ರವಾರದಂದು ಬೆಳ್ಳಂಬೆಳಿಗ್ಗೆ ಪೊಲೀಸ್​ ಕಂಟ್ರೋಲ್​ ರೂಮ್​ಗೆ ವ್ಯಕ್ತಿಯೊಬ್ಬ ಕರೆಮಾಡಿ ಖೈರಾನಿ ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸುತ್ತಿದ್ದಾನೆ ಎಂದು ತಿಳಿಸಿದ್ದಾನೆ. ಅದರಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ 34 ವರ್ಷ ವಯಸ್ಸಿನ ಮಹಿಳೆಯೊಬ್ಬಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಮಹಿಳೆಯ ಮೇಲೆ ಲೈಂಗಿಕ ಅತ್ಯಾಚಾರವೆಸಗಿ, ನಂತರ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಖಾಸಗಿ ಅಂಗಗಳಿಗೆ ಮತ್ತು ಇತರೆಡೆ ಗಾಯಗೊಳಿಸಿರುವುದು ತಿಳಿದುಬಂದಿದೆ. ಕೃತ್ಯ ನಡೆದ ವಾಹನದೊಳಗೆಲ್ಲಾ ರಕ್ತದ ಕಲೆಗಳು ಕಂಡುಬಂದಿದ್ದು, ತಕ್ಷಣವೇ ಕಾರ್ಯ ನಿರತರಾದ ಪೊಲೀಸರು ಕೂಡಲೇ ಆರೋಪಿ ಮೋಹನ್​ ಚೌಹಾನ್​(45) ಎಂಬುವವನನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ತಕ್ಷಣವೇ ಮಹಿಳೆಯನ್ನು ರಾಜವಾಡಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಯಿತು. ಆದರೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!