Saturday, April 20, 2024
spot_imgspot_img
spot_imgspot_img

CONTROVERSIAL NEWS..! “ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ..!” ಕುರಾನ್‌ಲ್ಲಿದೆಯಾ ಅಶಾಂತಿ, ಹಿಂಸೆಯ ಸಂದೇಶ..?!

- Advertisement -G L Acharya panikkar
- Advertisement -

ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಕುರಾನ್‌ನ ಕನ್ನಡ ಪ್ರತಿಯೊಂದು ಕಳೆದ ಕೆಲವು ದಿನಗಳಿಂದ ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಂತಿ, ಅಹಿಂಸೆಯ ಸಂದೇಶ ಸಾರುವ ಕುರಾನ್‌ನಲ್ಲಿ ಹೀಗೆ ಬರೆಯಲಾಗಿದೆಯಾ ಎಂಬ ಅನುಮಾನ ಈಗ ಮೂಡುತ್ತಿದೆ. ಕನ್ನಡ ಅನುವಾದಿತ ಕುರಾನ್‌ ಪ್ರತಿಯೊಂದರ ಸಾಲುಗಳನ್ನು ಕೆಂಪು ಶಾಯಿ ಪೆನ್ನಿನಲ್ಲಿ ಮಾರ್ಕ್‌ ಮಾಡಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಂದಹಾಗೆ ಇದರಲ್ಲಿ ಈ ರೀತಿಯಾಗಿ ಬರೆಯಲಾಗಿದೆ.

9. ಅತ್ತೌಬಃ
5. (ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ, ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ. ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ, ತರವಾಯು ಅವರ ಪಶ್ಚಾತಾಪ ಪಟ್ಟು ನಮಾಝ್‌ ಅನ್ನು ಪಾಲಿಸುವವರಾದರೆ ಮತ್ತು ಝಕಾತ್‌ ಅನ್ನು ಪಾವತಿಸಿದರೆ, ಅವರಿಗೆ ಅವರ ದಾರಿಯನ್ನು ಬಿಟ್ಟು ಕೊಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವನು ಮತ್ತು ಕರುಣಾಮಯಿಯಾಗಿದ್ದಾನೆ.

6. ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ, ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು.

ಇನ್ನೊಂದು ಪುಟದಲ್ಲಿ: ನಿಷೇಧಿತ ಮಾಸಗಳು ಕಳೆದ ಬಳಿಕ ’ಬಹುದೇವವಿಶ್ವಾಸಿಗಳನ್ನು ಸಿಕ್ಕಲ್ಲಿ ವಧಿಸಿರಿ. ಅವರನ್ನು ಸೆರೆ ಹಿಡಿಯಿರಿ. ಮುತ್ತಿಗೆ ಹಾಕಿರಿ. ಬೇಹು ನಡೆಸುವಲ್ಲೆಲ್ಲ ಅವರನ್ನು ಹೊಂಚು ಹಾಕುತ್ತಾ ಕುಳಿತು ಕೊಳ್ಳಿರಿ, ಮುಂದೆ ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ ಅನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್‌ ಕೊಟ್ಟರೆ ಅವರನ್ನು ಬಿಟ್ಟುಬಿಡಿರಿ. ಅಲ್ಲಾಹ್‌ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.

ಹೀಗೆಲ್ಲಾ ಬರೆದ ಕುರಾನ್ ಪ್ರತಿಯ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಕುರಾನ್‌ ಅನ್ನು ಓದಿದವರಿಗೆ ಈ ಸಂದೇಶ ಕಾಣಿಸಲಿಲ್ಲವೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಹಾಕಿದ್ದಾರೆ. ಇನ್ನು ಈ ಪುಸ್ತಕವನ್ನು ಶಾಂತಿ ಪ್ರಕಾಶನ ಮಂಗಳೂರು ಪ್ರಕಟಿಸಿದೆ. ಸದ್ಯ ಇದು ನಿಜವಾಗಿಯೂ ಕುರಾನ್ ಪ್ರತಿಯೋ ಅಥವಾ ದ್ವೇಷ ಹರಡುವ ಷಡ್ಯಂತ್ರವೋ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.

- Advertisement -

Related news

error: Content is protected !!