Friday, June 26, 2026
spot_imgspot_img
spot_imgspot_img

ದೇವಾಲಯದಲ್ಲೇ ಆತ್ಮಹತ್ಯೆಗೆ ಶರಣಾದ ಸ್ವಾಮೀಜಿ!

- Advertisement -
- Advertisement -

ಮುಂಬಯಿ: ಮುಂಬೈನ ಘಾಟ್‌ಕೋಪರ್ ಪ್ರದೇಶದ ಜೈನ ದೇವಾಲಯವೊಂದರಲ್ಲಿ 71 ವರ್ಷದ ಜೈನ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮನೋಹರ್ ಲಾಲ್ ಮುನಿ ಮಹಾರಾಜ್ ಬುಧವಾರ ರಾತ್ರಿ ನೇಣಿಗೆ ಶರಣಾಗಿದ್ದು, ಶವದ ಪಕ್ಕ ಡೆತ್ ನೋಟ್ ಸಿಕ್ಕಿದೆ, ತಮ್ಮ ಗುರುಗಳು ತನ್ನ ಕನಸಿನಲ್ಲಿ ಬಂದು ಭೂಮಿಯ ಮೇಲೆ ಕೆಲಸ ಮುಗಿದಿದ್ದರೇ ವಾಪಸ್ ಬರಬೇಕೆಂದು ಹೇಳಿದ್ದರು. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಇದರಲ್ಲಿ ಯಾವುದೇ ಅನುಮಾನವಿಲ್ಲ, ನಾವು ಡೆತ್ ನೋಟ್ ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಶವವನ್ನು ರಾಜವಾಡಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ವರದಿಯಾಗಿದೆ.

driving
- Advertisement -

Related news

error: Content is protected !!