Sunday, January 26, 2025
spot_imgspot_img
spot_imgspot_img

ಜೀವ ವಿಮಾ ಪಾಲಿಸಿಯ ಹಣಕ್ಕಾಗಿ ಸಹೋದರನನ್ನೇ ಕೊಲೆ ಮಾಡಿದ ತಮ್ಮ

- Advertisement -
- Advertisement -

ಬೆಳಗಾವಿ: ಅಣ್ಣನ ಹೆಸರಿಗೆ ಮಾಡಿದ್ದ 50 ಲಕ್ಷ ಮೊತ್ತದ ಜೀವ ವಿಮಾ ಪಾಲಿಸಿಯ ಹಣ ಪಡೆಯಲು ತಮ್ಮ ತನ್ನ ಇತರ ಸಹಚರರೊಂದಿಗೆ ಸೇರಿಕೊಂಡು ಸಹೋದರನನ್ನೇ ಹತ್ಯೆಗೈದಿರುವ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ನಡೆದಿದ್ದು ಇದೀಗ ಪೊಲೀಸರ ತನಿಖೆಯಲ್ಲಿ ವಿಚಾರ ಬೆಳಕಿಗೆ ಬಂದಿದೆ.

ಕಲ್ಲೋಳಿಯ ಹನುಮಂತ ಗೋಪಾಲ ತಳವಾರ(35) ಕೊಲೆಯಾಗಿರುವ ವ್ಯಕ್ತಿ.ತಮ್ಮ ಬಸವರಾಜ ತಳವಾರ ಹಾಗೂ ಆತನ ಸ್ನೇಹಿತರಾದ ಬಾಪು ಶೇಖ್, ಈರಪ್ಪ ಹಡಗಿನಾಳ ಮತ್ತು ಸಚಿನ ಕಂಟೆನ್ನವರ ಬಂಧಿತ ಆರೋಪಿಗಳು.ನ.7ರಂದು ಮೂಡಲಗಿ-ಕಲ್ಲೋಳಿ ರಸ್ತೆಯಲ್ಲಿ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಇದು ಸಹಜ ಸಾವಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ತನಿಖೆ ನಡೆಸಿದ ವೇಳೆ ಇದು ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಹನುಮಂತು ಅವರದ್ದು ಎಂಬುದು ಗೊತ್ತಾಗಿದೆ ಇದಾದ ಬಳಿಕ ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ ಅದರಂತೆ ಹನುಮಂತು ಅವರ ತಮ್ಮ ಬಸವರಾಜು ಅವರನ್ನು ವಿಚಾರಣೆ ನಡೆಸಿದ್ದಾರೆ ಈ ವೇಳೆ ಬಸವರಾಜು ಪೊಲೀಸರ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾನೆ ಇದರಿಂದ ಅನುಮಾನಗೊಂಡ ಪೊಲೀಸರು ಬಸವರಾಜುನನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ ಈ ವೇಳೆ ತಾನು ಎಸಗಿದ ಕೃತ್ಯ ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯಂತೆ ಕಳೆದ ವರ್ಷ ಹನುಮಂತು ಅವರ ಹೆಸರಿನಲ್ಲಿ ಬಸವರಾಜು 50 ಲಕ್ಷ ಮೊತ್ತದ ಜೀವ ವಿಮಾ ಪಾಲಿಸಿ ಮಾಡಿಸಿದ್ದಾನೆ ಅಲ್ಲದೆ ಅದಕ್ಕೆ ನಾಮಿನಿ ತನ್ನದೇ ಹೆಸರು ಹಾಕಿಸಿದ್ದಾನೆ ಇದಾಗಿ ಒಂದು ವರ್ಷಕ್ಕೆ ಅಣ್ಣನನ್ನು ಕೊಲೆ ಮಾಡಿ ಸಹಜ ಸಾವೆಂದು ನಂಬಿದರೆ ಪಾಲಿಸಿ ಹಣ ಲಪಟಾಯಿಸುವ ಯೋಚನೆ ಮಾಡಿ ತನ್ನ ಸಹಚರರಿಗೆ ಹಣದ ಆಮಿಷವೊಡ್ಡಿ ತನ್ನ ಜೊತೆ ಕೈ ಜೋಡಿಸುವಂತೆ ಕೇಳಿಕೊಂಡಿದ್ದಾನೆ ಅದಕ್ಕೆ ಸಹಚರರು ಸಾಥ್ ನೀಡಿದ್ದು ಅದರಂತೆ ಪ್ಲಾನ್ ಮಾಡಿ ಸಹೋದರನಿಗೆ ಮದ್ಯ ಕುಡಿಸಿ ಬಳಿಕ ಶ್ರೀಗಂಧದ ಕಟ್ಟಿಗೆ ತರೋಣ ಎಂದು ಕರೆದುಕೊಂಡು ಹೋಗಿ ತಲೆಗೆ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ರಸ್ತೆ ಬದಿ ಎಸೆದು ಹೋಗಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

- Advertisement -

Related news

error: Content is protected !!