Saturday, April 20, 2024
spot_imgspot_img
spot_imgspot_img

ಉಳ್ಳಾಲ: ಕರಾವಳಿಯಲ್ಲಿ ಮುಂದುವರಿದ ದುಷ್ಕರ್ಮಿಗಳ ಅಟ್ಟಹಾಸ; ಜಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಯತ್ನ..?!

- Advertisement -G L Acharya panikkar
- Advertisement -

ಉಳ್ಳಾಲ: ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವನಿಗೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಇಂದು ಬೆಳ್ಳಂಬೆಳಗ್ಗೆ ಉಚ್ಚಿಲ, ಮುಳ್ಳುಗಡ್ಡೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸ್‌ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ತೆರಳಿದ್ದು ಘಟನೆಯ ಕುರಿತಂತೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಳ್ಳಾಲ: ಬಿಜೆಪಿ ಕಾರ್ಯಕತನ ಮೇಲೆ ಹಲ್ಲೆಗೆ ಯತ್ನ..!?? ಕಮಿಷನರ್ ವಿಚಾರಣೆ ವೇಳೆ ನಿಜಾಂಶ ಬಯಲು

ಉಚ್ಚಿಲ ಜಾಲ ಹಿತ್ತಿಲು ನಿವಾಸಿ ಕಿಶೋರ್ ಸಾಲ್ಯಾನ್ ಎಂಬವರ ಮೇಲೆ ದಾಳಿಗೆ ಯತ್ನ ನಡೆದಿದೆ. ಬೆಳಗ್ಗೆ ಸುಮಾರು 7.30 ಗಂಟೆ ವೇಳೆಗೆ ಕಿಶೋರ್ ಅವರು ಮುಳ್ಳುಗುಡ್ಡೆಯ ನಿರ್ಜನ ಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾಗ ಮೂವರು ಆಗಂತುಕರು ಮಾರಕಾಸ್ತ್ರಗಳನ್ನ ಹಿಡಿದು ಅಟ್ಟಾಡಿಸಿದ್ದಾರೆ.

ಕಿಶೋರ್ ಅವರು ಪ್ರಾಣ ಉಳಿಸಲು ಓಡಿದ್ದು ರಕ್ಷಣೆಗಾಗಿ ಅಲ್ಲೇ ಇದ್ದ ಮುಸ್ಲಿಮರ ಅಂಗಡಿಯೊಂದಕ್ಕೆ ನುಗ್ಗಿದ್ದಾರೆ. ಆಗಂತುಕರು ಬಳಿಕ ಪರಾರಿಯಾಗಿದ್ದಾರೆ. ಕಿಶೋರ್ ಅವರು ಬಿಜೆಪಿ ಪಾಳಯದಲ್ಲಿ ಗುರುತಿಸಿದ್ದು ಈ ಹಿಂದೆ ಸೋಮೇಶ್ವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ಕಿಶೋರ್ ದಾಳಿ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು ಆಗಂತುಕರ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಉಳ್ಳಾಲ: ಬಿಜೆಪಿ ಕಾರ್ಯಕತನ ಮೇಲೆ ಹಲ್ಲೆಗೆ ಯತ್ನ..!?? ಕಮಿಷನರ್ ವಿಚಾರಣೆ ವೇಳೆ ನಿಜಾಂಶ ಬಯಲು

ಈ ಬಗ್ಗೆ ವಿಷಯ ತಿಳಿದ ಕೂಡಲೇ ಪೊಲೀಸ್‌ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ತೆರಳಿದ್ದು ದೂರು ಕೊಟ್ಟ ಕಾರ್ಯಕರ್ತನನ್ನೇ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಮಿಷನರ್, ಹಾಗೇನೂ ಆಗಿಲ್ಲ. ಆತನನ್ನು ವಿಚಾರಿಸಿದ್ದು ಯಾರೋ ಅಟ್ಟಿಸಿಕೊಂಡು ಬಂದಂತೆ ಕಂಡಿತ್ತು. ಹಾಗಾಗಿ ಭಯದಿಂದ ಓಡಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾನೆ. ನಾವು ದೂರು ಕೊಟ್ಟವನ ವಿರುದ್ಧ ಏಕ್ಷನ್ ತಗೋತೇವೆ ಎಂದಿದ್ದಾರೆ.

- Advertisement -

Related news

error: Content is protected !!