Thursday, June 18, 2026
spot_imgspot_img
spot_imgspot_img

ಖಾಸಗಿ ಹೆಲಿಕಾಪ್ಟರ್ ಪತನ : ಪೈಲಟ್‌ ಸೇರಿ ನಾಲ್ವರಿಗೆ ಗಾಯ

- Advertisement -
- Advertisement -

ಮುಂಬೈನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಶನಿವಾರ ಪುಣೆಯ ಪೌಡ್ ಗ್ರಾಮದಲ್ಲಿ ಪತನಗೊಂಡಿದೆ.

ಪೌಡ್ ಬಳಿ ಸಂಭವಿಸಿದ ಅಪಘಾತದಲ್ಲಿ ಎಲ್ಲಾ ನಾಲ್ವರು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪುಣೆ ಜಿಲ್ಲೆಯ ಪೌಡ್ ಗ್ರಾಮದ ಬಳಿ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್ ಖಾಸಗಿ ವಿಮಾನಯಾನ ಕಂಪನಿಗೆ ಸೇರಿದೆ. ಇದು ಮುಂಬೈನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು, ಹೆಲಿಕಾಪ್ಟರ್‌ನಲ್ಲಿ 4 ಜನರು ಪ್ರಯಾಣಿಸುತ್ತಿದ್ದರು.

ಹೆಲಿಕಾಪ್ಟ‌ರ್ ಅಪಘಾತಕ್ಕೆ ಪ್ರಾಥಮಿಕ ಕಾರಣ ತಾಂತ್ರಿಕ ದೋಷ ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷವಿದ್ದು, ಅದನ್ನು ನಿಯಂತ್ರಿಸುವುದು ಪೈಲಟ್‌ಗೆ ಕಷ್ಟಕರವಾಗಿದೆ. ಹಾಗೂ , ಈ ತಾಂತ್ರಿಕ ಅಸಮರ್ಪಕ ಕಾರ್ಯದ ಜೊತೆಗೆ, ಹವಾಮಾನ ವೈಪರೀತ್ಯದಿಂದಾಗಿ ಭಾರಿ ಮಳೆ ಮತ್ತು ಬಲವಾದ ಗಾಳಿಯ ನಡುವೆ ಹಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ಹಾರಿಸಲು ಪೈಲಟ್‌ಗೆ ಸವಾಲಾಗಿತ್ತು. ಹೀಗಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

- Advertisement -

Related news

error: Content is protected !!