- Advertisement -
- Advertisement -
ಕರಾವಳಿ ಮೂಲದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಹಲವು ಯಶಸ್ವಿ ‘ಆಪರೇಷನ್ ಗಳನ್ನು ಮಾಡಿದ ಹೆಸರಾಂತ ಹಾಗೂ ಸುರದ್ರೂಪಿ ಗುರುಕಿರಣ್ ಇನ್ನು ಮುಂದೆ ಡಾಕ್ಟರ್ ಗುರುಕಿರಣ್ ಆಗಲಿದ್ದಾರೆ.
ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿನ ಅವರ ಅದ್ವಿತೀಯ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಸಂತಸ ತಂದಿದೆ.
‘ದೊರೆತ ಗೌರವ ನನ್ನ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ಗುರುಕಿರಣ್ ಪ್ರತಿಕ್ರಿಯಿಸಿದ್ದಾರೆ. ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿರುವ ಗುರುಕಿರಣ್, ಬೆಂಗಳೂರಿಗೆ ವಾಪಸ್ ಆಗುವ ನಿರೀಕ್ಷೆ ಇದೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸೆಪ್ಟೆಂಬರ್ 10 ರಂದು ಗೌರವ ಡಾಕ್ಟರೇಟ್ ಗುರುಕಿರಣ್ ಅವರಿಗೆ ನೀಡಿ ಗೌರವಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
- Advertisement -