- Advertisement -
- Advertisement -
ಮಂಗಳೂರು :- ಮುಸ್ಲಿಮ್ ಐಕ್ಯತಾ ವೇದಿಕೆ, ಕುದ್ರೋಳಿ ಇದರ ವತಿಯಿಂದ ಕಂಡತ್ಪಳ್ಳಿಯಿಂದ ಬೊಕ್ಕಪಟ್ಙ ವರೆಗೆ ಪ್ರತಿಯೊಂದು ಮನೆಗೆ ಭೇಟಿ ನೀಡಿ ಕೋವಿಡ್- 19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗ್ರತಿ ಮೂಡಿಸುವ ಮತ್ತು ಮನೆಯ ಎಲ್ಲಾ ಸದಸ್ಯರ ಸಮಗ್ರ ಮಾಹಿತಿಯನ್ನು ಪಡೆಯುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.


ವೇದಿಕೆಯ ಅಧ್ಯಕ್ಷರಾದ ಜ! ಕೆ.ಇ. ಅಶ್ರಫ್ ರವರು ಸರ್ವೆ ಫಾರ್ಮ್ ನೀಡುವ ಮುಖಾಂತರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬಿ. ಅಬೂಬಕ್ಕರ್, ಯಾಸೀನ್, ಕಾರ್ಯದರ್ಶಿ ಅಬ್ದುಲ್ ಅಝೀಝ್, ಕೋಶಾಧಿಕಾರಿ ಮಕ್ಬೂಲ್ ಅಹ್ಮದ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.


- Advertisement -