Friday, April 26, 2024
spot_imgspot_img
spot_imgspot_img

ಮೈಸೂರು: ಗ್ಯಾಂಗ್ ರೇಪ್ ಪ್ರಕರಣ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಸಂತ್ರಸ್ತೆ ಸ್ನೇಹಿತ

- Advertisement -G L Acharya panikkar
- Advertisement -

driving

ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸ್ನೇಹಿತ ಪೊಲೀಸರಿಗೆ ಮಹತ್ವದ ಮಾಹಿತಿಗಳನ್ನು ನೀಡಿದ್ದು, 6 ಜನರ ಗುಂಪು ತನ್ನ ಸ್ನೇಹಿತೆಯನ್ನು ಎಳೆದೊಯ್ದು ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: ಮಂಗಳೂರು: ಅಪಘಾತಕ್ಕೆ ಸಂಬಂಧಿಸಿ ವಾಗ್ವಾದ- ಪೊಲೀಸರಿಂದ ಲಘು ಲಾಠಿ ಪ್ರಹಾರ

ಆ.24ರಂದು ಸಂಜೆ 7:25ರ ಸುಮಾರಿಗೆ ಕ್ಲಾಸ್ ಮುಗಿಸಿಕೊಂಡು ನಾನು ನನ್ನ ಗೆಳತಿ ಬೈಕ್ ನಲ್ಲಿ ಹೊರಟಿದ್ದೆವು. ಜೆ ಎಸ್ ಎಸ್ ಕಾಲೇಜು ಬಳಿಯ ಕಚ್ಚಾ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳಿದ್ದೆವು. ಅದು ನಾವು ಪ್ರತಿ ನಿತ್ಯ ಜಾಗಿಂಗ್ ಹೋಗುವ ಸ್ಥಳ. ನಾವು ಅಲ್ಲಿ ಬೈಕ್ ನಿಲ್ಲಿಸಿದಾಗ 25-30 ವರ್ಷದ 6 ಯುವಕರು ನಾವಿದ್ದ ಸ್ಥಳಕ್ಕೆ ಬಂದು ನನ್ನ ಮೇಲೆ ಏಕಾಏಕಿ ದೊಣ್ಣೆಯಿಂದ ಹಲ್ಲೆ ಮಾಡಿ ನನ್ನ ಸ್ನೇಹಿತೆಯನ್ನು ಎಳೆದೊಯ್ದಿದ್ದಾರೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದ ಕಾರು!

ನನ್ನ ಸ್ನೇಹಿತೆಯನ್ನು ಪೊದೆಗಳಿದ್ದ ಜಾಗಕ್ಕೆ ಎಳೆದೊಯ್ದಿದ್ದಾರೆ. ಇದೇ ವೇಳೆ ಯುವಕರ ಗುಂಪಿನಲ್ಲಿದ್ದ ಓರ್ವ ನನಗೆ ಕಲ್ಲಿನಿಂದ ತಲೆಗೆ ಹೊಡೆದ. ಇದರಿಂದ ನಾನು ಪ್ರಜ್ಞೆ ತಪ್ಪಿ ಬಿದ್ದೆ. 15 ನಿಮಿಷದ ಬಳಿಕ ನನಗೆ ಪ್ರಜ್ಞೆ ಬಂತು. ನನ್ನ ತಂದೆಗೆ ಕಾಲ್ ಮಾಡಿಸಿ 3 ಲಕ್ಷ ರೂಪಾಯಿ ತರುವಂತೆ ಒತ್ತಾಯ ಮಾಡಿದರು. ನನ್ನ ಗೆಳತಿಯನ್ನು ಎಳೆದುಕೊಂಡು ಬಂದರು. ಅಷ್ಟೊತ್ತಿಗೆ ನನ್ನ ಸ್ನೇಹಿತೆ ಗಾಯಗೊಂಡು ನಿತ್ರಾಣರಾಗಿದ್ದರು ಎಂದು ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!