Sunday, June 29, 2025
spot_imgspot_img
spot_imgspot_img

ಕಾರು ಅಪಘಾತದ ವೇಳೆ ಸಹಾಯಕ್ಕೆಂದು ಧಾವಿಸಿದವರು ಮಸಣ ಸೇರಿದ್ದು ಹೇಗೆ? – ವಿದ್ಯುತ್ ಪ್ರವಹಿಸಿ ಇಬ್ಬರು ಮೃತ್ಯು

- Advertisement -
- Advertisement -

ಕಾರೊಂದು ಅಪಘಾತಕ್ಕೀಡಾಗಿ ಅದಕ್ಕೆ ವಿದ್ಯುತ್ ಪ್ರವಹಿಸಿದ ಕಾರಣ ಸಹಾಯಕ್ಕೆ ಬಂದ ಇಬ್ಬರಿಗೆ ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿತ್ತು. ಸದ್ಯ ಅಪಘಾತದ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ. ಆದರೆ ಅಪಘಾತದ ಬಳಿಕ ಸಹಾಯಕ್ಕೆ ಬಂದ ಇಬ್ಬರು ಮಸಣ ಸೇರಿದ್ದಾರೆ.

ಕಿರಣ್ ಹಾಗೂ ರವಿಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ ದುರ್ದೈವಿಗಳು. ಈ ಘಟನೆಯಲ್ಲಿ ಇನ್ನೊಬ್ಬ ಡೆಲಿವರಿ ಬಾಯ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಕಾರು ಅಪಘಾತವಾದ ಬಳಿಕ ಅದರಲ್ಲಿದ್ದವರು ಸಹಾಯಕ್ಕೆ ಕೆಲ ಹುಡುಗರನ್ನು ಫೋನ್ ಮಾಡಿ ಕರೆದಿದ್ದರು. ಆದರೆ ಸ್ಥಳದಲ್ಲೇ ವಿದ್ಯುತ್ ತಂತಿಯೊಂದು ತುಂಡಾಗಿದ್ದುದು ಅರಿವಿಗೆ ಬರಲಿಲ್ಲ. ಯುವಕರು ಸಹಾಯಕ್ಕೆ ಆಗಮಿಸಿ ಕಾರನ್ನು ಎತ್ತಲು ಮುಂದಾದಾಗ ವಿದ್ಯುತ್ ತಂತಿ ತುಳಿದು ನಾಲ್ವರಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಘಟನೆಯಲ್ಲಿ ಕಿರಣ್ ಹಾಗೂ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮತ್ತೊಬ್ಬ ಡೆಲಿವರಿ ಬಾಯ್‌ನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತ ವ್ಯಕ್ತಿಗಳ ಕುಟುಂಬ ಬಡತನದವರಾಗಿದ್ದು, ಕೆಪಿಟಿಸಿಎಲ್ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!