Saturday, June 27, 2026
spot_imgspot_img
spot_imgspot_img

ತಂದೆ – ತಾಯಿಯ ಸಾವಿನಿಂದ ಮನನೊಂದು ಹುಟ್ಟುಹಬ್ಬದ ದಿನದಂದೇ ಸಾವಿಗೆ ಶರಣಾದ ಯುವಕ!

- Advertisement -
- Advertisement -

ಮೈಸೂರು: ಯುವಕನೊರ್ವ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾದ ಘಟನೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ನಡೆದಿದೆ.

ಮೃತ ಯುವಕನನ್ನು ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಎಸ್.ಕಾರ್ತಿಕ್ (30) ಎಂದು ಗುರುತಿಸಲಾಗಿದೆ.

ಮೃತಪಟ್ಟ ಯುವಕ ಕಾರ್ತಿಕ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದು, ಎನ್.ಆರ್.ಮೊಹಲ್ಲಾದಲ್ಲಿ ಬಾಡಿಗೆ ರೂಂನಲ್ಲಿ ವಾಸವಿದ್ದರು. ತಂದೆ ಹಾಗೂ ತಾಯಿಯ ಸಾವಿನಿಂದ ಆಘಾತಕೊಳಗಾದ ಅವರು ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಾಯಿ ಸಾವನ್ನಪ್ಪಿದ ದಿನ ವಿಷ ಸೇವಿಸಿದ್ದ ಕಾರ್ತಿಕ ತಂದೆ ಸಾವಿನ ಬಳಿಕ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆನ್ನಲಾಗಿದೆ. ಚಿಕ್ಕಮ್ಮನೊಂದಿಗೆ ವಾಸವಿದ್ದ ಕಾರ್ತಿಕ್​​, ಇಂದು ಡೆತ್​ ನೋಟ್​ ಬರೆದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!