Sunday, June 14, 2026
spot_imgspot_img
spot_imgspot_img

ಕಾಸರಗೋಡು: ಚೂಡಿದಾರ್‌ ಶಾಲ್‌ ಯಂತ್ರಕ್ಕೆ ಸಿಲುಕಿ ಹುಟ್ಟುಹಬ್ಬದ ದಿನವೇ ಮಹಿಳೆ ದಾರುಣ ಸಾವು..!!

- Advertisement -
- Advertisement -

ಕಾಸರಗೋಡು: ಹುಟ್ಟು ಹಬ್ಬದ ದಿನದಂದೇ ಚೂಡಿದಾರ್‌ನ ಶಾಲ್ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಮಂಜೇಶ್ವರ ತೂಮಿನಾಡಿನಲ್ಲಿ ನಡೆದಿದೆ.

ತೂಮಿನಾಡಿನ ರಂಜನ್ ಎಂಬವರ ಪತ್ನಿ ಜಯಶೀಲ (22) ಮೃತಪಟ್ಟವರು.

ತೂಮಿನಾಡುನಲ್ಲಿರುವ ಬೇಕರಿಯೊಂದರ ಕಾರ್ಮಿಕೆಯಾಗಿದ್ದು, ಎಂದಿನಂತೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಯಂತ್ರಕ್ಕೆ ಚೂಡಿದಾರ್ ಶಾಲು ಸಿಲುಕಿ ದುರ್ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಜಯಶೀಲರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಇಂದು ಜಯಶೀಲರ ಹುಟ್ಟು ಹಬ್ಬವಾಗಿದ್ದು, ಇಂದೇ ಧಾರುಣ ಘಟನೆ ಸಾವನ್ನಪ್ಪಿದ್ದಾರೆ ನಡೆದಿದೆ.

ಇನ್ನು ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.

- Advertisement -

Related news

error: Content is protected !!