Friday, March 29, 2024
spot_imgspot_img
spot_imgspot_img

ಇಂದು ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವನ್ನು ಉದ್ದೇಶಿಸಿ ಮೋದಿ ಭಾಷಣ

- Advertisement -G L Acharya panikkar
- Advertisement -

ಮೈಸೂರು: ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಕೀರ್ತಿ ಗಳಿಸಿರುವ ಮೈಸೂರು ವಿವಿಗೆ ಇಂದು 100ನೇ ವರ್ಷದ ಘಟಿಕೋತ್ಸವ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಘಟಿಕೋತ್ಸವವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮೈಸೂರು ವಿಶ್ವವಿದ್ಯಾಲಯವು 1916ರ ಜುಲೈ 27 ರಂದು ಸ್ಥಾಪನೆಯಾಗಿದ್ದು, ಕರ್ನಾಟಕ, ದಕ್ಷಿಣ ಭಾರತದ ಪ್ರಥಮ ಹಾಗೂ ದೇಶದ 6ನೇ ವಿಶ್ವವಿದ್ಯಾಲಯವಾಗಿದೆ.ಈ ಬಗ್ಗೆ ಸ್ವತಃ ನರೇಂದ್ರ ಮೋದಿಯವರೇ ಟ್ವೀಟ್​ ಮಾಡಿ ಖಚಿತ ಪಡಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಗಳ ಕುಲಾಧಿಪತಿಗಳು, ರಾಜ್ಯಪಾಲ ವಜೂಭಾಯಿ ವಾಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!