Monday, April 29, 2024
spot_imgspot_img
spot_imgspot_img

ಇಂದು ಯದುವೀರರ ಎರಡನೇ ದಿನದ ಖಾಸಗಿ ದರ್ಬಾರ್

- Advertisement -G L Acharya panikkar
- Advertisement -

ಮೈಸೂರು: ಅರಮನೆಯ ಆಗ್ನೇಯ ದಿಕ್ಕಿನಲ್ಲಿರೋ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಇಂದು ತಾಯಿ ಚಾಮುಂಡಿಯ ಎರಡನೇ ಅವತಾರ ಬ್ರಹ್ಮಚಾರಿಣಿ ಮಾತೆಯ ಪೂಜೆ ನೆರವೇರಿಸಲಾಯಿತು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ತಾಯಿಗೆ ಪೂಜೆ ಸಲ್ಲಿಸಿದ್ದಾರೆ.

ಅರಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ನವರಾತ್ರಿ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೂಜೆಯಲ್ಲಿ ಪೂಜೆಯಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಹಾಗೂ ಒಂಟೆ ಭಾಗಿಯಾಗಿದ್ದವು. ಬೆರಳೆಣಿಕೆಯಷ್ಟು ಪುರೋಹಿತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನದಂತೆ ಪೂಜೆ ಸಲ್ಲಿಸಲಾಯಿತು. ಇಂದು ಯದುವೀರರ ಎರಡನೇ ದಿನದ ಖಾಸಗಿ ದರ್ಬಾರ್​ ಕೂಡಾ ನಡೆಯುತ್ತಿದೆ.

- Advertisement -

Related news

error: Content is protected !!