ಮಂಗಳೂರು:- ಈ ಬಾರಿಯ ನಾಗರ ಪಂಚಮಿಗೂ ತಟ್ಟಿದ ಕೊರೋನಾ ಎಫೆಕ್ಟ್ ನಿಂದಾಗಿ ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಸಿಲಾಗಿದೆ.ಜು.25ರ ಶನಿವಾರ ನಾಗರಪಂಚಮಿ ದಿನ ಭಕ್ತರ ಪ್ರವೇಶ ಸಂಪೂರ್ಣ ಬಂದ್ ಆಗಲಿದೆ ಎಂದು ಕುಡುಪು ಶ್ರೀ ಅನಂತ ಪದ್ಮನಾಭ ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಗಾರಾಧನೆಗೆ ಹೆಸರುವಾಸಿಯಾಗಿರುವ ಒಂದು ಭವ್ಯ ಕ್ಷೇತ್ರ ಇದು. ನಾಗ ದೇವರಿಗೆ ಸೇರಿದ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮೊದಲನೆಯ ಸ್ಥಾನದಲ್ಲಿದ್ದರೆ, ಕುಡುಪು ಪದ್ಮನಾಭ ಸ್ವಾಮಿ ದೇವಾಲಯ ಎರಡನೇ ಸ್ಥಾನದಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನು ಭಕ್ತನ ಭಕ್ತಿಗೆ ಮೆಚ್ಚಿ ನೆಲೆಸಿದ್ದಾನೆ ಎನ್ನಲಾಗುತ್ತದೆ.ಮಂಗಳೂರಿನ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ದಕ್ಷಿಣ ಕನ್ನಡದಲ್ಲಿ ನಾಗದೋಷ ಪ್ರಸಿದ್ಧಿ ಪಡೆದಿವೆ. ಇಲ್ಲಿ ದಿನನಿತ್ಯ ನಾಗ ತಂಬಿಲ, ಆಶ್ಲೇಷ ಬಲಿ ಪೂಜೆ ನಡೆಯುವುದು ವಿಶೇಷ.
ಪ್ರತೀ ವರ್ಷ ನಾಗರಪಂಚಮಿ ಹಿನ್ನೆಲೆ ಲಕ್ಷಾಂತರ ಭಕ್ತರಿಂದ ಪೂಜೆ ಸಲ್ಲಿಕೆ ಆಗುತ್ತದೆ. ಈ ವರ್ಷ ಕೊರೊನಾ ಮಾಹಮಾರಿ ರೋಗದ ಹಿನ್ನೆಲೆಯಲ್ಲಿ ನಾಗರ ಪಂಚಮಿಯ ದಿನ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ.ಈ ನಿರ್ಬಂಧ ಹಿನ್ನೆಲೆ ಕ್ಷೇತ್ರದ ಆವರಣಕ್ಕೆ ಭಕ್ತಾದಿಗಳು ಬರುವಂತಿಲ್ಲ.ಹಾಗೂ ನಾಗರ ಪಂಚಮಿಯ ದಿನದಂದು ಸೇವೆಗಳು, ಸೇವಾಪ್ರಸಾದ, ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆಗಳು ಇರುವುದಿಲ್ಲ ಹಾಗೂ ನಾಗರ ಪಂಚಮಿಯ ಪ್ರಯುಕ್ತ ನಾಗ ತಂಬಿಲ, ಪಂಚಾಮೃತ, ಆಶ್ಲೇಷ ಬಲಿ ಮೊದಲಾದ ಯಾವುದೇ ಸೇವೆಗಳು ಇಲ್ಲ ಮೊನ್ನೆಯಷ್ಟೆ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿತು. ಈಗ ಕುಡುಪು ಶ್ರೀ ಅನಂತ ಪದ್ಮನಾಭ ದೇವಳದ ಆಡಳಿತ ಮಂಡಳಿ ಕೂಡ ಪ್ರಕಟಣೆ ತಿಳಿಸಿದೆ.