Tuesday, April 30, 2024
spot_imgspot_img
spot_imgspot_img

ಬಂಟ್ವಾಳ : ಅಕ್ರಮ ಜುಗಾರಿ ಆಟದ ಅಡ್ಡಕ್ಕೆ ಪೊಲೀಸ್‌ ದಾಳಿ

- Advertisement -G L Acharya panikkar
- Advertisement -

ಬಂಟ್ವಾಳ : ಅಕ್ರಮ ಜುಗಾರಿ ಆಟದ ಅಡ್ಡಕ್ಕೆ ಪೊಲೀಸ್‌ ದಾಳಿ ನಡೆಸಿದ ಘಟನೆ ಸಜಿಪಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ನಡೆದಿದೆ.

ಸಾರ್ವಜನಿಕ ಗುಡ್ಡದಲ್ಲಿ ಯಾವುದೇ ಅನುಮತಿಯಿಲ್ಲದೇ, ಅಕ್ರಮವಾಗಿ ಹಣ ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪಿಎಸ್ಸೆ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ.ಜುಗಾರಿ ಆಟದಲ್ಲಿ ನಿರತರಾಗಿದ್ದ ಸ್ಥಳೀಯ ನಿವಾಸಿಗಳಾದ ಪ್ರವೀಣ ಬೆಳ್ಳಡ (40), ರಂಜಿತ್ (26), ನವೀನ (31), ಪ್ರವೀಣ್ ಪೂಜಾರಿ (40) ಹಾಗೂ ಹರೀಶ್ (39) ಎಂಬವರನ್ನು ಬಂಧಿಸಲಾಗಿದೆ.

ಬಂಧಿತರಿಂದ ನಗದು, 2 ದ್ವಿಚಕ್ರ ವಾಹನ ಸಹಿತ ಸುಮಾರು 81,520/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ :-139/2023, ಕಲಂ: 87 ಕೆ ಪಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!