Tuesday, May 14, 2024
spot_imgspot_img
spot_imgspot_img

ಸಂಸದನಾಗಿ ಜಿಲ್ಲೆಯ ಜನರ ಪರ ಧ್ವನಿಯಾದ ನಳಿನ್‌ ಕುಮಾರ್‌ ಕಟೀಲ್‌

- Advertisement -G L Acharya panikkar
- Advertisement -

2004ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ರಾಜಕೀಯ ರಂಗ ಎಂಟ್ರಿ ಕೊಟ್ಟ ನಳಿನ್‌ ಕುಮಾರ್‌ ಕಟೀಲ್‌ರವರು ಪ್ರಸ್ತುತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮಂತ್ರಿ ಜನಾರ್ಧನ ಪೂಜಾರಿ ಅವರನ್ನು ಸತತ ಎರಡು ಬಾರಿ ಸೋಲಿಸಿ ಸಂಸದರಾಗಿ ಚುನಾಯಿತರಾಗಿದ್ದಾರೆ. 12 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆಗೈದ ಇವರು ತಮ್ಮ 18ನೇ ವಯಸ್ಸಿನಲ್ಲಿಯೇ ಇವರು ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಯಾದರು.

2019ರಲ್ಲಿ ನಡೆದ 16ನೇ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಜನಾರ್ಧನ ಪೂಜಾರಿ ಅವರನ್ನು 40,420 ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ಸಂಸದರಾದವರು. ದಕ್ಷಿಣ ಕನ್ನಡ ಜಿಲ್ಲೆಯ ಜನರ ಪರ ಧ್ವನಿಯಾಗಿ ನಿಂತಿರುವ ನಳಿನ್‌ ಕುಮಾರ್‌ ಕಟೀಲ್‌ ಅನೇಕ ಬಡ ಕುಟುಂಬಗಳ ಬಾಳಿಗೆ ಬೆಳಕಾದವರು. ರಾಜ್ಯವೇ ಬೆಚ್ಚಿ ಬೀಳಿಸಿದ ಪ್ರವೀಣ್‌ ನೆಟ್ಟಾರ್‌ ಹತ್ಯೆಯ ಸಂದರ್ಭ ಕಾರ್ಯಕರ್ತರೆಲ್ಲರೂ ಕಟೀಲ್‌ರವರ ಕಾರಿಗೆ ಮುತ್ತಿಗೆ ಹಾಕಿದ್ದರು. ಆದರೂ ಅದ್ಯಾವುದನ್ನೂ ಮನಸಿನಲ್ಲಿಡದೆ ಪ್ರವೀಣ್‌ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಬೆಳಕಾಗಿ ನಿಂತವರೇ ನಳಿನ್‌ ಕುಮಾರ್‌ ಕಟೀಲ್‌.

ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಹಾಗೂ ಆರ್ಥಿಕ ಸಹಕಾರ ಕೊಟ್ಟವರಿಗೆ ಲುಕ್ ಔಟ್ ನೋಟೀಸ್ ಜಾರಿಗೊಳಿಸಿ, ಸರಿಯಾದ ತನಿಖೆ ನಡೆಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು. ಹೆಚ್ಚಿನ ತನಿಖೆಗಾಗಿ ಎ‌ನ್‌ಐಎ ತಂಡಕ್ಕೆ ಈ ಪ್ರಕರಣವನ್ನು ನೀಡಿದ್ದು, ತಪ್ಪಿಸಿಕೊಂಡವರ ಪತ್ತೆಗೆ ಎನ್‌ಐಎ ವಿಶೇಷ ಬಹುಮಾನವನ್ನೂ ಘೋಷಿಸಲಾಗಿತ್ತು. ಪ್ರವೀಣ್ ಹತ್ಯೆ ಬಳಿಕ ಪಿಎಫ್ಐ ನಿಷೇಧ ಆಗಿದೆ. ಸದ್ಯ ‌ಹತ್ಯೆ ಕೇಸ್ ಆರೋಪಿಗಳು ಯಾವ ಕೋರ್ಟ್ ನಲ್ಲೂ ಹೊರ ಬರದ ಹಾಗೆ ನಳಿನ್‌ ಕುಮಾರ್‌ರವರು ಎಲ್ಲಾ ವ್ಯವಸ್ಥೆಗಳನ್ನು ಮಾಡುವಲ್ಲಿ ಸರ್ಕಾರಕ್ಕೆ ಒತ್ತಾಯ ಹೇರಿದ್ದಾರೆ.

ಪ್ರವೀಣ್ ಕನಸು ನನಸು ಪಕ್ಷದ ವತಿಯಿಂದ ನಳಿನ್‌ ಕುಮಾರ್‌ರವರ ಮುತುವರ್ಜಿಯಿಂದ ಕನಸಿನ ಮನೆ ನಿರ್ಮಾಣವಾಗಿದ್ದು, 60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ 2700 ಚ.ಅಡಿಯ ಮನೆಯ ಗೃಹಪ್ರವೇಶವನ್ನೂ ಬಹಳ ಅದ್ದೂರಿಯಾಗಿ ನಡೆಸಲಾಗಿತ್ತು. ಪ್ರವೀಣ್ ಪತ್ನಿಗೆ ಡಿಸಿ ‌ಕಚೇರಿಯಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡಲಾಗಿದ್ದು, ಬಿಜೆಪಿಯಿಂದ 25 ಲಕ್ಷ, ಸರ್ಕಾರ 25 ಲಕ್ಷ ಹಾಗೂ ಯುವಮೋರ್ಚಾ 15 ಲಕ್ಷ ದಷ್ಟು ಪರಿಹಾರ ಧನವಾಗಿ ಪ್ರವೀಣ್‌ ಕುಟುಂಬಕ್ಕೆ ನೀಡಲಾಗಿದೆ. ಪ್ರವೀಣ್ ನಮ್ಮ ಒಂದೊಳ್ಳೆ ಕಾರ್ಯಕರ್ತ, ಅವನ ಕುಟುಂಬದ ಜೊತೆ ನಾವು ಇದ್ದೇವೆ ಎಂಬ ಭರವಸೆಯ ಮಾತನ್ನು ಈಡೇರಿಸಿದ ಒಬ್ಬ ಸಂಸದ ಅಂದರೆ ಅದು ನಳಿನ್‌ ಕುಮಾರ್‌ ಕಟೀಲ್‌.

- Advertisement -

Related news

error: Content is protected !!