- Advertisement -
- Advertisement -
ಬ್ರಹ್ಮಾವರ: ಫ್ಯಾಕ್ಟರಿಯೊಂದರಿಂದ ಸೂರತ್ ಮತ್ತು ಅಹ್ಮದಾಬಾದ್‌ಗೆ ತಲುಪಬೇಕಾಗಿದ್ದ ಕೋಟ್ಯಂತರ ರೂ. ಮೌಲ್ಯದ ಗೋಡಂಬಿಯನ್ನು ತಲುಪಿಸದೆ ವಂಚಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುಸ್ಸಾಯಿ ಬಂಧಿತ ಆರೋಪಿಯನ್ನು ಮಹೇಂದ್ರಪುರಿ ಲಾಲ್‌ಪುರಿ ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದ ವಿರಾರ್ ಮತ್ತು ಗನ್ ಸೋಲಿ ಎಂಬಲ್ಲಿಂದ ಗೋಡಂಬಿ ತುಂಬಿದ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯಿಂದ ಟ್ರಕ್ ಸಹಿತ ಒಟ್ಟು 88,37,430ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
- Advertisement -