Monday, May 6, 2024
spot_imgspot_img
spot_imgspot_img

ಇಂದಿನಿಂದ ನಂದಿನಿ ಹಾಲು, ಮೊಸರಿಗೆ ಪ್ರತಿ ಲೀ.ಗೆ 3 ರೂ. ಹೆಚ್ಚಳ

- Advertisement -G L Acharya panikkar
- Advertisement -

ನಂದಿನಿ ಹಾಲು ಪ್ರತಿ ಲೀಟರ್​ಗೆ ಹಾಗೂ ಮೊಸರಿನ ದರ ಪ್ರತಿ ಕೆ.ಜಿಗೆ 3 ರೂಪಾಯಿ ಹಚ್ಚಳ ಮಾಡಲಾಗಿದೆ. ಇಂದಿನಿಂದ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್​ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 21ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿನ ದರವನ್ನು 3 ರೂಪಾಯಿಗೆ ಏರಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ನಂದಿನಿ ಹಾಲು &ಉತ್ಪನ್ನಗಳ ನೂತನ ದರ-ಟೋಲ್ಡ್ ಮಿಲ್ಕ್ – ಹಿಂದಿನ ದರ 39 ರೂ – ಪರಿಷ್ಕೃತ ದರ 42 ರೂ, ಹೋಮೋಜೆನೈಸ್ಡ್ ಹಿಂದಿನ ದರ 40 ರೂ – ಪರಿಷ್ಕೃತ ದರ 43 ರೂ, ಹಸುವಿನ ಹಾಲು ( ಹಸಿರು ಪೊಟ್ಟಣ ) ಹಿಂದಿನ ದರ 43 ರೂ – ಪರಿಷ್ಕೃತ ದರ 46 ರೂ, ಶುಭಂ ಹಾಲು–ಹಿಂದಿನ ದರ 45 ರೂ – ಇಂದಿನ ದರ 48 ರೂ, ಮೊಸರು ಪ್ರತಿ ಕೆಜಿ – ಹಿಂದಿನ ದರ 47 ರೂ- ಈಗಿನ ದರ 50 ರೂ, ಮಜ್ಜಿಗೆ 200 ಎಂ.ಎಲ್ – ಹಿಂದಿನ ದರ 8 ರೂ – ಪರಿಷ್ಕೃತ 9 ರೂ ಆಗಿದೆ ಎಂದು ಕೆಎಂಎಫ್​ ತಿಳಿಸಿದೆ.

- Advertisement -

Related news

error: Content is protected !!