Friday, April 19, 2024
spot_imgspot_img
spot_imgspot_img

ಕೊರೊನಾ ಸೋಂಕಿನಿಂದಾದ ಸಂಕಷ್ಟ ನೆನೆದು ಭಾವುಕರಾದ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಿ ಮೋದಿ ಇಂದು ವ್ಯಾಕ್ಸಿನೇಷನ್​ಗೆ ಚಾಲನೆ ನೀಡಿ ದೇಶವನ್ನುದ್ದೇಶಿಸಿ ಮಾತನಾಡಿದರು. ಕೊರೊನಾ ದೇಶದಲ್ಲಿ ಉಲ್ಬಣಗೊಂಡ ಸಮಯದಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸರು, ಕೊರೊನಾ ವಾರಿಯರ್ಸ್ ತಿಂಗಳುಗಳ ಕಾಲ ಮನೆಗೆ ತೆರಳಲಾಗದೇ ಸಂಕಷ್ಟ ಅನುಭವಿಸುವಂತಾಯ್ತು. ಹಗಲು ರಾತ್ರಿ ಆಸ್ಪತ್ರೆಗಳಲ್ಲಿ ಉಳಿದುಕೊಂಡು ಕೊರೊನಾ ಸೋಂಕಿಗೊಳಗಾದವರಿಗೆ ಚಿಕಿತ್ಸೆ ನೀಡಿದರು. ಹೀಗಾಗಿಯೇ ಅವರಿಗೆ ಮೊದಲ ಹಂತದಲ್ಲೇ ವ್ಯಾಕ್ಸಿನ್ ನೀಡಲಾಗ್ತಿದೆ ಎಂದರು.

ಕೊರೊನಾ ತಂದ ಸಂಕಷ್ಟ, ಆರೋಗ್ಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್ಸ್​ ಬಗ್ಗೆ ಹೇಳುತ್ತಾ ಗದ್ಗರಿತರಾದ ಮೋದಿ. ಈ ರೋಗ ಜನರನ್ನು ತಮ್ಮ ಕುಟುಂಬಗಳಿಂದ ದೂರವಿರಿಸಿತು. ತಾಯಂದಿರು ತಮ್ಮ ಮಕ್ಕಳಿಂದ ದೂರವಿರಬೇಕಾಯಿತು. ಜನರು ಆಸ್ಪತ್ರೆಗಳಲ್ಲಿ ದಾಖಲಾದ ವೃದ್ಧರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಕೊರೊನಾದಿಂದ ಸಾವನ್ನಪ್ಪಿದವರಿಗೆ ಸರಿಯಾದ ಅಂತಿಮ ವಿಧಿವಿಧಾನ ನಡೆಸಲು ಸಾಧ್ಯವಾಗಲಿಲ್ಲ ಎಂದು ಹೇಳುವಾಗ ಮೋದಿ ಭಾವುಕರಾಗಿ ಕಣ್ಣೀರು ಹಾಕಿದರು.

- Advertisement -

Related news

error: Content is protected !!