Thursday, May 16, 2024
spot_imgspot_img
spot_imgspot_img

ಕಾಸರಗೋಡು: ಗಾಂಜಾ ಸಹಿತ ಓರ್ವನ ಬಂಧನ – ಮತ್ತೋರ್ವ ಪರಾರಿ

- Advertisement -G L Acharya panikkar
- Advertisement -

ಕಾಸರಗೋಡು: ಎರಡು ಕಿಲೋ ಗಾಂಜಾ ಸಹಿತ ಓರ್ವನನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಪರಾರಿಯಾದ ಘಟನೆ ಬೇಕಲ ಚೇರ್ಕಪ್ಪಾರದಲ್ಲಿ ನಡೆದಿದೆ.

ಕಾಸರಗೋಡು ಡಿ ವೈ ಎಸ್ಪಿ ಸಿ.ಕೆ ಸುನಿಲ್ ಕುಮಾರ್ ನೇತೃತ್ವದ ತಂಡವು ಬೇಕಲ ಚೇರ್ಕಪ್ಪಾರ ದ ರಾಪನಡ್ಕ ಕಾಲನಿಯ ಆರೋಪಿ ಅಜರುದ್ದೀನ್ (22) ಬಂಧಿಸಿದ್ದು, ನಾಸರ್ (20) ಪರಾರಿಯಾಗಿದ್ದಾನೆ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾಲನಿಯ ಮನೆ ಯೊಂದಕ್ಕೆ ದಾಳಿ ನಡೆಸಿದ್ದು, ಓರ್ವ ನನ್ನು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ಈ ಮನೆ ಕೇಂದ್ರೀಕರಿಸಿ ಗಾಂಜಾ ವಹಿವಾಟು ನಡೆಯುತ್ತಿತ್ತು ಎನ್ನಲಾಗಿದೆ.

- Advertisement -

Related news

error: Content is protected !!