



ಪಡಿಬಾಗಿಲು: ಬಂಟ್ವಾಳ ತಾಲೂಕು ದ ಕ ಜಿ ಪ ಹಿ ಪ್ರಾ ಪಡಿಬಾಗಿಲು ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೇಪು ಕಲ್ಲಂಗಳ ಸರಕಾರಿ ಪ್ರಾಢಶಾಲೆಯ ಶಿಕ್ಷಕ ಲಕ್ಷ್ಮಣ್ ಮಾತನಾಡಿ ವಿಜ್ಞಾನದ ಬೆಳವಣಿಗೆಯಿಂದ ತಂತ್ರಜ್ಞಾನದ ಮೂಲಕ ದೇಶದ ಭವಿಷ್ಯ ಉಜ್ವಲವಾಗುತ್ತದೆ, ಯಾವುದೇ ವಿಚಾರಗಳ ಸತ್ಯತೆಯನ್ನು ವಿಜ್ಞಾನವು ತಿಳಿಸಿಕೊಡುತ್ತದೆ ಇದರಿಂದ ಮೂಡನಂಬಿಕೆಗಳು ನಾಶವಾಗುತ್ತವೆ ಮತ್ತು ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ, ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವ ಮೈರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಗಜೀವನರಾಮ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಜಿನಚಂದ್ರ ಜೈನ್, ಸವಿತಾ ಶೆಟ್ಟಿ,ಲಿಂಗಪ್ಪ ಗೌಡ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಪೋಷಕರು ಅಧ್ಯಾಪಕರು, ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲ್ಲಡ್ಕದ ಪ್ರಸಿದ್ದ ಕೆ ಟಿ .ಹೋಟೆಲ್ ಲಕ್ಷ್ಮೀಗಣೇಶ್, ಇದರ ಮಾಲಕರಾದ ಶ್ರೀಮತಿ ಪದ್ಮಾವತಿ ರಾಜೇಂದ್ರ ಎನ್ ಹೊಳ್ಳ ಮತ್ತು ಮಕ್ಕಳು ಸುಮಾರು 23,500 ಬೆಲೆಬಾಳುವ ಬ್ಯಾಂಡ್ ಸೆಟ್ ಶಾಲೆಗೆ ಕೊಡುಗೆಯಾಗಿ ನೀಡಿದನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಕೆ ರೈ ಸ್ವಾಗತಿಸಿ, ಶಿಕ್ಷಕಿ ಲಲಿತ ವಂದಿಸಿದರು, ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.








